", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/34454720250205050947filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ : ಉತ್ತಮ ಫೋಷಕಾಂಶಗಳುಳ್ಳ ಸಮತೋಲನ ಆಹಾರ ಸೇವನೆಯಿಂದ ಉತ್ತಮ ಸದೃಡ ಆರೋಗ್ಯವಂತರಾಗಬಹುದು ಎಂದು ಬುದ್ಧನಗರ ಆರೋಗ್ಯ ಕೇಂದ್ರದ ಹಿರಿಯ ...Read more" } ", "keywords": "Node,Chitradurga,News", "url": "https://publicnext.com/node" }
ಚಿತ್ರದುರ್ಗ : ಉತ್ತಮ ಫೋಷಕಾಂಶಗಳುಳ್ಳ ಸಮತೋಲನ ಆಹಾರ ಸೇವನೆಯಿಂದ ಉತ್ತಮ ಸದೃಡ ಆರೋಗ್ಯವಂತರಾಗಬಹುದು ಎಂದು ಬುದ್ಧನಗರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸಮೂರ್ತಿ ಹೇಳಿದರು.
ರಾಜೇಂದ್ರ ನಗರದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಗರ್ಭಿಣಿಯರಿಗಾಗಿ ಏರ್ಪಡಿಸಿದ್ದ ಪೌಷ್ಠಿಕಾಂಶಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಜನರು ಆಧುನಿಕ ಆಹಾರ ಪದ್ಧತಿಗೆ ಮಾರು ಹೋಗಿ, ಕಾಳುಗಳು ಕಾಯಿ ಪಲ್ಯೆಗಳ ಉಪಯೋಗ ಕಡಿಮೆ ಮಾಡಿದ್ದಾರೆ.
ಇಡ್ಲಿ, ದೋಸೆ, ಪಲಾವ್, ಅವಲಕ್ಕಿ, ಪುಳಿಯೋಗರೆ, ಬೇಳೆ ಬಾತ್ ಹೀಗೆ ಹೇಳುತ್ತಾ ಹೋದರೆ ಅಕ್ಕಿಯಿಂದ ತಯಾರಿಸಿದ ತಿನಿಸುಗಳ ದೊಡ್ಡ ಪಟ್ಟಿಯೇ ಬೆಳೆಯುತ್ತದೆ ಇವೆಲ್ಲವುಗಳ ಮಧ್ಯೆ ಕಾಳುಗಳು, ಮೊಳಕೆ ಕಾಳುಗಳು, ಕಾಯಿ ಪಲ್ಯೆಗಳು, ರೊಟ್ಟಿ, ಚಟ್ಣಿ, ರಾಗಿ, ಜೋಳ ಗೋಧಿ, ಸಿರಿಧಾನ್ಯಗಳನ್ನು ಬಹಳಷ್ಟು ಜನ ಮರೆತೇ ಹೋಗಿದ್ದಾರೆ. ಹಿಂದೆ ಇವುಗಳನ್ನೆ ತಿನ್ನುವ ಪದ್ಧತಿ ಇದ್ದುದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇದ್ದುದು ತಿಳಿದಿದೆ.
ಇತ್ತೀಚಿನ ಜನರಲ್ಲಿ ಆಧುನಿಕ ಆಹಾರ ಪದ್ಧತಿಗಳಿಂದ ಬಹುತೇಕ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆಯೇನೊ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಎಲ್ಲರು ಉತ್ತಮ ಫೋಷಕಾಂಶಗಳುಳ್ಳ ಆಹಾರ ಸೇವಿಸಿ, ಬಾಣಂತಿಯರು, ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.
Kshetra Samachara
05/02/2025 05:11 pm