", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738505298-WhatsApp-Image-2025-02-02-at-7.38.07-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ : ಗಂಡನ ಜೊತೆ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು ಗ್ರಾಪಂ ಸದಸ್ಯನ ಜೊತೆ ಪ್ರೀತಿಯ ನಾಟಕವಾಡಿ, ಹನಿ ಟ್ರ್ಯಾಪ್ ಬಲೆಯಲ್ಲಿ ಕೆಡವಿರು...Read more" } ", "keywords": "Chitradurga, Honey Trap, Gram Panchayat Member Arrested, Karnataka Crime News, Honey Trap Scandal, Chitradurga Police, Cyber Crime, Karnataka News, Rural Karnataka Crime.,Crime", "url": "https://publicnext.com/node" }
ಚಿತ್ರದುರ್ಗ : ಗಂಡನ ಜೊತೆ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು ಗ್ರಾಪಂ ಸದಸ್ಯನ ಜೊತೆ ಪ್ರೀತಿಯ ನಾಟಕವಾಡಿ, ಹನಿ ಟ್ರ್ಯಾಪ್ ಬಲೆಯಲ್ಲಿ ಕೆಡವಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ನಗರದ ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ತನಗೆ ಮೋಸವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರೀತಿ ಹೆಸರಲ್ಲಿ ನಾಟಕವಾಡಿ ಮಹಿಳೆ ಹನಿ ಟ್ರ್ಯಾಪ್ ಮಾಡಿದ್ದು, ಬೆದರಿಕೆ ಹಾಕುತ್ತಿದ್ದಾಳೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಮಹಿಳೆಯ ಬೆದರಿಕೆಗೆ ನಿದ್ದೆ ಮಾತ್ರೆ ಸೇವಿಸಿ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 9 ವರ್ಷಗಳಿಂದ ಮಂಜುನಾಥ್, ಸೌಮ್ಯ ಎಂಬಾಕೆಯ ಜೊತೆ ಲಿವಿಂಗ್ ರಿಲೇಶನ್ ನಲ್ಲಿದ್ದಾರಂತೆ. ಒಂದೇ ಮನೆಯಲ್ಲಿ ಪತಿ- ಪತ್ನಿಯಂತೆ ಜೀವನ ಕೂಡಾ ನಡೆಸಿದ್ದಾರೆ. ಆದರೆ, ಅನ್ಯ ಪುರುಷರ ಜೊತೆ ಸೌಮ್ಯಗೆ ಅಕ್ರಮ ಸಂಬಂಧ ಇದೆ ಎಂದು ಮಂಜುನಾಥ್ ಆರೋಪಿಸಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ್ ಮೇಲೆ ಸೌಮ್ಯ ಹಲ್ಲೆ, ದೂರು ಕೂಡ ನೀಡಿದ್ದಾಳೆಂದು ಮಂಜುನಾಥ್ ಆರೋಪಿಸಿದ್ದಾರೆ.
PublicNext
02/02/2025 07:38 pm