ಚಳ್ಳಕೆರೆ : ನಗರದಲ್ಲೇ ಹಾಡಹಗಲೆ ಮನೆ ಮುಂದೆ ಕುಳಿತಿದ್ದ ಕುಳಿತಿದ್ದ ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಚಳ್ಳಕೆರೆ ನಗರದ ಸಚಿವ ಡಿ.ಸುಧಾಕರ್ ಮನೆ ಹಿಂಭಾಗದ ಕುಬೇರನಗರದ ವಾಸಿ ಉಷಾದೇವಿ (60) ತನ್ನ ಮನೆ ಮುಂದೆ ರಸ್ತೆಯ ಕಡೆ ಬೆನ್ನು ಮಾಡಿ ಕುಳಿತಿದ್ದು ರಸ್ತೆಯಲ್ಲಿ ಜನ ದಟ್ಟಣೆ ಇಲ್ಲದೆ ಇರುವುದನ್ನು ಹೊಂಚು ಹಾಕಿದ್ದ ಕಳ್ಳರು ಬೈಕ್ ನಲ್ಲಿ ಬಂದು ಚಿನ್ನದ ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಪೋಲಿಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರ್ .ಡಿ.ವೈಎಸ್ಪಿ ರಾಜಣ್ಣ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಹಾಡುಹಗಲಲ್ಲೇ ಈ ಘಟನೆ ನಡೆದಿರುವುದು ನಗರದ ಮಹಿಳೆಯರನ್ನು ಹಾಗೂ ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ....
Kshetra Samachara
01/02/2025 02:32 pm