ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಜೆಸಿಬಿ ಮಾಲೀಕರಿಂದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕೇಸ್

ಚಿತ್ರದುರ್ಗ: ಜೆಸಿಬಿ ಮಾಲೀಕರಿಗೆ ಕಂತು ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡಿ, JCB ಸೀಜ್ ಮಾಡಿದ್ದಾರೆಂದು ಆರೋಪಿಸಿ, ಬ್ಯಾಂಕ್ ಮ್ಯಾನೇಜರ್ ಸೇರಿ ಮೂರು ಮಂದಿ ವಿರುದ್ದ JCB ಮಾಲೀಕ FIR ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆನಕಲನಹಳ್ಳಿ ಮೂಲದ JCB ಮಾಲೀಕ ವೀರೇಶ್ ಎಂಬಾತ ದೂರು ದಾಖಲು ಮಾಡಿದ್ದಾನೆ. ಹೆಚ್ ಡಿ ಬಿ ಬ್ಯಾಂಕ್ ಮ್ಯಾನೇಜರ್ ಬಸವರಾಜ್ ಹಾಗೂ ವಿನಯ್, ಅಂಬರೀಶ್ ಎಂಬುವವರ ವಿರುದ್ದ ಕೇಸ್ ದಾಖಲು ಮಾಡಿದ್ದಾನೆ. 33 ಲಕ್ಷದ 80 ಸಾವಿರ ಮೌಲ್ಯದ JCB ಯನ್ನ, 5 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಖರೀದಿ ಮಾಡಲಾಗಿತ್ತು. 29 ತಿಂಗಳು ಯಾವುದೇ ಕಂತು ವಿಳಂಭ ಮಾಡದೇ ಕಟ್ಟಲಾಗಿತ್ತು. ಆದರೆ ಒಂದೇ ಒಂದು ಕಂತು ಬಾಕಿ ಉಳಿಸಿಕೊಂಡಿದ್ದಕ್ಕೆ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು, ಯಾವುದೇ ನೋಟೀಸ್ ನೀಡದೇ JCB ಯಂತ್ರ ಎಳೆದೊಯ್ದಿದ್ದಾರೆ. ಎಂದು ಆರೋಪಿಸಿ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

01/02/2025 04:43 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ