", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/39031220250205054602filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "9741588525" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಲಹೊಂಗಲ: ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಗತ್ಯವಾಗಿದ್ದು, ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ...Read more" } ", "keywords": "Node,Belgaum,Cultural-Activity", "url": "https://publicnext.com/node" } ಬೈಲಹೊಂಗಲ: ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸುವ ಕೇಂದ್ರಗಳು - ಬಿಇಓ ಎ.ಎನ್ ಪ್ಯಾಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸುವ ಕೇಂದ್ರಗಳು - ಬಿಇಓ ಎ.ಎನ್ ಪ್ಯಾಟಿ

ಬೈಲಹೊಂಗಲ: ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಗತ್ಯವಾಗಿದ್ದು, ಸರಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಾಕಾರಗೊಳಿಸುತ್ತಿವೆ ಎಂದು ಬಿಎಓ ಎ.ಎನ್.ಪ್ಯಾಟಿ ಹೇಳಿದರು.

ಅವರು ಪಟ್ಟಣದ ಶಾಸಕರ ಮತಕ್ಷೇತ್ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 4 ರಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ, 8 ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುಗೆ ಮತ್ತು ಮುಖ್ಯೋಪಾಧ್ಯಾಯ ಸಿ.ಬಿ.ಶೀಗಿಹಳ್ಳಿ ಅವರ ವಯೋ ನಿವೃತ್ತಿ ಸಮಾರಂಭ ಉದ್ಗಾಟಿಸಿ ಮಾತನಾಡಿ, ಹಲವಾರು ಸಾಧಕರನ್ನು ರಾಜ್ಯದ ಕನ್ನಡ ಶಾಲೆಗಳು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದು ದೇಶ-ವಿದೇಶದಲ್ಲಿಯೂ ಸಹ ಕನ್ನಡದ ಕೀರ್ತಿ ಬೆಳಗಿಸಿ ಉದ್ಯೋಗ-ಉದ್ಯಮ ನಡೆಸುತ್ತಿರುವದು ಹೆಮ್ಮಯಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಮಾತನಾಡಿ, ಸರಕಾರಿ ಶಾಲೆಗಳೆಂದರೆ ಸಮಾಜದ ಕಣ್ಣಿದ್ದಂತೆ, ಇಂಥಹ ಶಾಲೆಗಳಲ್ಲಿ ಕಲಿತಂತಹ ಹಳೇ ವಿದ್ಯಾರ್ಥಿಗಳು ನಮ್ಮ ಶಾಲೆ-ನಮ್ಮ ಜವಾಬ್ದಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ರಾಜ್ಯದ ಪ್ರತಿ ಶಾಲೆಗಳು ಹೈಟೆಕ್ ಆಗಲು ಸಾಧ್ಯವಾಗಲಿದ್ದು ಈ ಆಶಯ ಹೆಚ್ಚಿನ ಪ್ರಚಾರ ಪಡೆಯಬೇಕಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಪ್ರಸ್ತಾವಿಕವಾಗಿ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ, ಉಪಾಧ್ಯಕ್ಷ್ಯೆ ಗಂಗಮ್ಮ ಸಾಲಿ, ಪುರಸಭೆ ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ ಬಸವರಾಜ ಕಲಾದಗಿ, ಸಿಆರ್‍ಪಿ ಎಸ್.ಐ.ಜನ್ಮಟ್ಟಿ, ಬಿ.ಆರ್.ಸಿ ರಾಜು ಹಕ್ಕಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಕಾರ್ಯದರ್ಶಿ ಸಿ.ಎಸ್.ಭಜಂತ್ರಿ, ಕೋಶ್ಯಾಧ್ಯಕ್ಷ ಪರಶುರಾಮ ಸೊಂಟಕ್ಕಿ, ಎನ್‍ಜಿಓ ಸದಸ್ಯ ವಿವೇಕ ಗಾಣಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೊರಟ್ಟಿ, ಎಸ್‍ಡಿಎಂಸಿ ಸದಸ್ಯರಾದ ಗದಿಗೆಪ್ಪ ಮಡಿವಾಳರ, ಮಹಾಂತೇಶ ರಾಜಗೋಳಿ, ನಾಗರಾಜ ಸಾಲಿಮಠ, ಪೂಜಾ ಕೊಟಬಾಗಿ, ರಾಮನಿಂಗ ಗೋಣಿ, ಪವಿತ್ರಾ ತಲ್ಲೂರ, ಭಾರತಿ ಬಾದಾಮಿ, ಪುರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಹೇಮಲತಾ ಹಿರೇಮಠ, ಸದಸ್ಯ ಶ್ರೀದೇವಿ ದೇವಲಾಪೂರ, ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಐ.ಮಿರ್ಜಣ್ಣವರ ವೇದಿಕೆ ಮೇಲಿದ್ದರು.

Edited By : PublicNext Desk
Kshetra Samachara

Kshetra Samachara

05/02/2025 05:47 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ