", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/39031220250204075100filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "9741588525" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಲಹೊಂಗಲ : ಕವಿಯಿತ್ರಿ, ಸಾಹಿತಿ, ನಿವೃತ್ತ ಶಿಕ್ಷಕಿ ಮಲ್ಲಮ್ಮ ರುದ್ರಗೌಡ ಪಾಟೀಲ ರಚಿತ ಅವನಿ ಮನದ ದನಿ ಕವನ ಸಂಕಲನ ಬಿಡುಗಡೆ ಹಾಗೂ ಗೌರವ ಸನ್ಮಾ...Read more" } ", "keywords": "Node,Belgaum,Cultural-Activity", "url": "https://publicnext.com/node" } ಬೈಲಹೊಂಗಲ : ಅವನಿ ಮನದ ದನಿ ಕವನ ಸಂಕಲನ ಬಿಡುಗಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ಅವನಿ ಮನದ ದನಿ ಕವನ ಸಂಕಲನ ಬಿಡುಗಡೆ

ಬೈಲಹೊಂಗಲ : ಕವಿಯಿತ್ರಿ, ಸಾಹಿತಿ, ನಿವೃತ್ತ ಶಿಕ್ಷಕಿ ಮಲ್ಲಮ್ಮ ರುದ್ರಗೌಡ ಪಾಟೀಲ ರಚಿತ ಅವನಿ ಮನದ ದನಿ ಕವನ ಸಂಕಲನ ಬಿಡುಗಡೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಪಟ್ಟಣದ ವಿಜಯ ಸೋಶಿಯಲ್ ಕ್ಲಬ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. 

47 ಕವನಗಳನ್ನು ಒಳಗೊಂಡಿರುವ ಕವನ ಸಂಕಲನ ಸಭೀಕರ ಗಮನ ಸೆಳೆಯಿತು. ಬಹಳ ದಿನಗಳ ನಂತರ ಪಟ್ಟಣದಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತು ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮ ಇದಾಗಿತ್ತು. 

ಬೆಳಗಾವಿ ಹಿರಿಯ ಮಹಿಳಾ ಸಾಹಿತಿ, ನಿವೃತ್ತ ಪ್ರಾಚಾರ್ಯೆ ಡಾ.ಭಾರತಿ ಮಠದ ಹಾಗೂ ಹಿರಿಯ ಸಾಹಿತಿ ಡಾ.ಸಿ.ಕೆ.ಜೋರಾಪೂರ ಮಾತನಾಡಿ, ಅನೇಕ ವಿಚಾರ ಮತ್ತು ವೈವಿಧ್ಯತೆಗಳನ್ನು ಕವನದ ಮೂಲಕ ಹೆಣೆಯಲಾಗಿದೆ. ಮನಮುಟ್ಟುವಂತೆ ಶಬ್ಧಗಳ ಬಳಕೆಯಾಗಿದೆ ಎಂದು ಕವನ ಸಂಕಲನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಮಲ್ಲಮ್ಮ ಪಾಟೀಲ 30 ವರ್ಷಗಳ ಕಾಲ ಶಿಕ್ಷಕಿಯಾಗಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ಅವರು, ಅದ್ಭುತ ಪ್ರತಿಭೆ ಆಗಿದ್ದಾರೆ. ಅವರ ಸಾಹಿತ್ಯ ಜನಪ್ರಿಯವಾಗಲೆಂದು ಶುಭ ಹಾರೈಸಿದರು. 

ಹಿರಿಯ ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳಾಗಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಹಿರಿಯ ಪತ್ರಕರ್ತ ಈಶ್ವರ ಹೋಟಿ, ಜಿಲ್ಲಾ ಕದಳಿ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು, ಶಿಷ್ಯವೃಂದ ಹಾಗೂ ಕುಟುಂಬಸ್ಥರು, ಮಲ್ಲಮ್ಮ ಪಾಟೀಲ ಅವರನ್ನು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಮಹಾಶೆಟ್ಟಿ, ಗುರುದೇವಿ ಯಕ್ಕುಂಡಿ, ಬಸನಗೌಡ ನಾಯ್ಕರ, ವರ್ಷಿಣಿ ಪಾಟೀಲ, ಮೀನಾಕ್ಷಿ ಕುಡಸೋಮಣ್ಣವರ, ಪ್ರಕಾಶ ಕುಡೋಳ್ಳಿ, ಬಸಪ್ಪಗೌಡ ನಾಯ್ಕರ, ದಾನಮ್ಮಾ ಈಟಿ, ವಿದ್ಯಾ ನೀಲಪ್ಪನವರ, ರಮೇಶ ಹುನಗುಂದ, ಗೀತಾ ಪಾಟೀಲ ಹಾಗೂ ಶಿಕ್ಷಕರು, ಮಹಾಶೆಟ್ಟಿ, ಪಾಟೀಲ ಪರಿವಾರದ ಸದಸ್ಯರು, ಹಳೇ ವಿದ್ಯಾರ್ಥಿಗಳು, ನೂರಾರು ಜನರು ಪಾಲ್ಗೊಂಡಿದ್ದರು. ಇಂಜನೀಯರ್ ರಶ್ಮೀ ಪಾಟೀಲ 

Edited By : PublicNext Desk
Kshetra Samachara

Kshetra Samachara

04/02/2025 07:52 pm

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ