ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಾಠಾ ಲಘು ಪದಾತಿದಳದ ದಿನಾಚರಣೆ : ಗಮನ ಸೆಳೆದ ರೂಪಕ

ಬೆಳಗಾವಿ : 257 ವರ್ಷ ಸುದೀರ್ಘ ಇತಿಹಾಸ ಹೊಂದಿದ ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಸಂಸ್ಥಾಪನಾ ದಿನ ಆಚರಿಸಲಾಯಿತು.

ಬೆಳಗಾವಿಯ ಮರಾಠಾ ಲಘು ಪದಾತಿದಳದ ಶಿವಾಜಿ ಮೈದಾನದಲ್ಲಿ ಮಹಾರಾಷ್ಟ್ರ ದ ಸಂಸ್ಕೃತಿ ಇಲಾಖೆ ಸಚಿವ ಆಶಿಶ್ ಶೇಲಾರ್ ಉದ್ಘಾಟಿಸಿದರು. ಮರಾಠಾ ಲಘು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾನಾಜಿ ಮಾಲುಸರೆ ವಂಶಸ್ಥರಾದ ಶೀಲಾತಾಯಿ ಮಾಲುಸರೆ, ಧಾರವಾಡದ ಭಾರತೀಯ ಅಂಚೆ ಇಲಾಖೆಯ ನಿರ್ದೇಶಕಿ ತಾರಾ, ಸೇರಿದಂತೆ ಮಾಜಿ ಸೈನಿಕರು, ಮರಾಠಾ ಲಘು ಪದಾತಿದಳದ ಹಿರಿಯ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಸಚಿವ ಆಶಿಶ್ ಶೇಲಾರ್, ಯುದ್ಧನೀತಿಯ ಪರಾಕ್ರಮದ ಭವ್ಯ ಪರಂಪರೆಯನ್ನು ಹೊರ ನೀತಿಯ ಅನುಸರಣೆಯೊಂದಿಗೆ ಜೀವಂತಗೊಳಿಸುವುದು ಅಗತ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಮಾದರಿಯನ್ನು ಅನುಸರಿಸುತ್ತಿರುವ ಮರಾಠಾ ಲೈಟ್ ಇನ್‌ಫೆಂಟ್ರಿ ದೇಶಕ್ಕೆ ಮಾತ್ರವಲ್ಲ ವಿಶ್ವದಲ್ಲಿಯೇ ಖ್ಯಾತಿ ಪಡೆದುಕೊಂಡಿದೆ. ಮರಾಠ ಲಘು ಪದಾತಿದಳ ಸೈನಿಕರ ಮಿಂಚಿನ ಹೋರಾಟ ಬ್ರಿಟಿಷ್ ಆಡಳಿತಕ್ಕೂ ಬೆರಗುಗೊಳಿಸಿತ್ತು ಎಂದು ತಿಳಿಸಿದರು.

ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ, ಸೈನಿಕರಲ್ಲಿ ತ್ಯಾಗ ಮಹತ್ವದ ಮೌಲ್ಯವಾಗಿದೆ. ಮರಾಠಾ ಲೈಟ್ ಇನ್‌ಫೆಂಟ್ರಿ ಅಸ್ತಿತ್ವಕ್ಕೆ ಬರುವಲ್ಲಿ ಅಪ್ರತಿಮ ಹೋರಾಟಗರ ತಾನಾಜಿ ಮಾಲುಸೇರೆ ಅವರ ಹೋರಾಟ ಹಾಗೂ ತ್ಯಾಗ ಒಂದು ಮಾದರಿಯಾಗಿದೆ. ಮನೆಯಲ್ಲಿ ಮಗನ ಮದುವೆ ಇದ್ದರೂ ಅದನ್ನು ಬದಿಗೊತ್ತಿ ಹೋರಾಟದ ಕಣಕ್ಕಿಳಿದು ಪ್ರಾಣ ತ್ಯಾಗ ಮಾಡಿದ ಮಹಾಶೂರ ಎಂದು ನೆನಪಿಸಿದರು.

ಶಿವಾಜಿ ಮಹಾರಾಜರ ಹೋರಾಟದ ಪರಾಕ್ರಮ ಮತ್ತು ಪಟ್ಟಾಭಿಷೇಕದ ರೋಚಕ ಇತಿಹಾಸವನ್ನು ಆಕರ್ಷಕ ರೂಪಕ ಪ್ರದರ್ಶನ ಭವ್ಯ ವೇದಿಕೆಯಲ್ಲಿ ಗಮನ ಸೆಳೆಯಿತು.

Edited By : Somashekar
Kshetra Samachara

Kshetra Samachara

05/02/2025 04:16 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ