", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/39031220250204055843filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "9741588525" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೈಲಹೊಂಗಲ: ನೈಋತ್ಯ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ (ಡಿಆರ್‍ಯುಸಿಸಿ) ಸದಸ್ಯರಾಗಿ ಬೈಲಹೊಂಗಲ ಮತಕ್ಷೇತ್ರದ ಹೊಸೂರಿನ ಬಿಜೆಪಿ ಸಂಘಟನಾ ಮ...Read more" } ", "keywords": "Node,Belgaum,Cultural-Activity", "url": "https://publicnext.com/node" }
ಬೈಲಹೊಂಗಲ: ನೈಋತ್ಯ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ (ಡಿಆರ್‍ಯುಸಿಸಿ) ಸದಸ್ಯರಾಗಿ ಬೈಲಹೊಂಗಲ ಮತಕ್ಷೇತ್ರದ ಹೊಸೂರಿನ ಬಿಜೆಪಿ ಸಂಘಟನಾ ಮುಖಂಡ ಎಫ್.ಎಸ್. ಸಿದ್ದನಗೌಡರ ನಾಮನಿರ್ದೇಶನಗೊಂಡಿರುವ ಸಮೀಪದ ಮುರಗೋಡ ಗ್ರಾಮದ ಭಜನಾ ಸಭಾ ಭವನದಲ್ಲಿ ಬಿಜೆಪಿ ಹಾಗೂ ಪಂಚಮಸಾಲಿ ಪದಾಧಿಕಾರಿಗಳ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಾನಿಧ್ಯ ವಹಿಸಿದ್ದ ಕೂಡಲಸಂಗಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜನಸೇವೆ ಮಾಬೇಕೆಂಬ ಹಂಬಲದಿಂದ ಮೌಲ್ಯಾಧಾರಿತ ರಾಜಕಾರಣಿಯಾಗಿ ರಾಜಕೀಯ ರಂಗದಲ್ಲಿ ಸಕ್ರೀಯವಾಗಿ ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಮುಖಂಡ ಎಫ್.ಎಸ್. ಸಿದ್ದನಗೌಡರ ಅವರು ಕೇಂದ್ರ ಸರಕಾರದ ನಾಮನಿರ್ದೇಶನವಾಗಿರುವುದು ಮೆಚ್ಚುವಂತಹದ್ದು. ಹೆಚ್ಚಿನ ಸೂಕ್ತ ಪ್ರೊತ್ಸಾಹ ದೊರೆತು ಮುಂದಿನ ದಿನಗಳಲ್ಲಿ ಇವರು ಉನ್ನತ ಸ್ಥಾನಮಾನ ಅಲಂಕರಿಸುವಂತಾಗಲಿ ಎಂದು ಹಾರೈಸಿದರು.
ಯುವ ಮುಖಂಡ ಚಂದ್ರಗೌಡ ಪಾಟೀಲ, ರೋಹಿಣಿ ಬಾಬಾಸಾಹೇಬ ಪಾಟೀಲ, ಕುಮಾರ ಪೂಜಾರ ಮಾತನಾಡಿದರು.
ಬಿಜೆಪಿ ಮುಖಂಡ ಶಿವಾನಂದ ದಳವಾಯಿ, ಸದಾಶಿವ ಪಾಟೀಲ, ಮಹಾಂತೇಶ್ವರ ಕಾರಿ, ಪರಮಾನಂದ ತಟ್ಟಿಮನಿ, ಯಶವಂತ ಪಾಟೀಲ, ಈರಣ್ಣ ಸಿದ್ದನಗೌಡರ, ಮಹಾಂತೇಶ ಬೆಟ್ಟದ, ಶ್ರೀಕಾಂತ ಪಾಟೀಲ, ಮಹಾಂತೇಶ ಹಡಪದ, ಮಲ್ಲಪ್ಪ ಕಾರಿ ಇತರರು ಉಪಸ್ಥಿತರಿದ್ದರು. ಸಮೋಮಪ್ಪ ಹಡಪದ ಸ್ವಾಗತಿಸಿದರು.
Kshetra Samachara
04/02/2025 06:01 pm