", "articleSection": "Infrastructure,Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1738672593-11.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ದೇವಸ್ಥಾನ, ಜಾತ್ರೆಗಳಿಗೆ ಹೋದಾಗ ದೇವರ ಫೋಟೋಗಳನ್ನು ಮನೆಗೆ ತರುವುದು ರೂಢಿ. ಹೀಗೆ ತಂದ ಫೋಟೋಗಳನ್ನು ಕೆಲ ವರ್ಷ ಪೂಜಿಸಿದ ನಂತರ ಅವು ...Read more" } ", "keywords": "Belagavi, Liberation Ritual, Spiritual Practice, Selfless Service, Social Recognition, Karnataka News, Belagavi News, Human Interest Story, Inspiring Story.,Belgaum,Infrastructure,Human-Stories", "url": "https://publicnext.com/node" }
ಬೆಳಗಾವಿ: ದೇವಸ್ಥಾನ, ಜಾತ್ರೆಗಳಿಗೆ ಹೋದಾಗ ದೇವರ ಫೋಟೋಗಳನ್ನು ಮನೆಗೆ ತರುವುದು ರೂಢಿ. ಹೀಗೆ ತಂದ ಫೋಟೋಗಳನ್ನು ಕೆಲ ವರ್ಷ ಪೂಜಿಸಿದ ನಂತರ ಅವು ಹಳೆಯದಾಗುತ್ತವೆ. ಒಂದಿಷ್ಟು ಫೋಟೋಗಳು ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮನೆ ಸ್ವಚ್ಛಗೊಳಿಸುವಾಗ ಹಾನಿಯಾಗುತ್ತವೆ. ಹಾಗಾಗಿ, ಅಂತಹ ಫೋಟೋಗಳನ್ನು ಪೂಜಿಸಬಾರದು ಎಂಬ ನಂಬಿಕೆಯಿಂದ ಅವುಗಳನ್ನು ಗಿಡದ ಕೆಳಗೋ, ನದಿ ದಂಡೆಯ ಮೇಲೋ ಇಟ್ಟು ಬರುವುದು ಸಾಮಾನ್ಯ. ಇಂಥ ಫೋಟೋಗಳಿಗೆ ಕಳೆದ 6 ವರ್ಷಗಳಿಂದ ಬೆಳಗಾವಿಯ ವಿರೇಶ ಹಿರೇಮಠ ಮುಕ್ತಿ ಕೊಡಿಸುತ್ತಿದ್ದಾರೆ.
ಇಲ್ಲಿಯವರೆಗೆ 55 ಸಾವಿರಕ್ಕೂ ಅಧಿಕ ದೇವರ ಫೋಟೋಗಳನ್ನು ಇವರ ಮೂಲಕ ವಿಸರ್ಜಿಸಲಾಗಿದೆ. ಹಲವಾರು ಮಠಾಧೀಶರು, ಶಾಸ್ತ್ರಿಗಳು, ಅರ್ಚಕರು, ಸಮಾಜಸೇವಕರು ಹಾಗೂ ನಾಗರಿಕರು ಸಹಕಾರ ಕೊಡುತ್ತಿದ್ದಾರೆ. ತಮಗೆ ದೇವರ ಫೋಟೋ ವಿಸರ್ಜಿಸಲು ಆಗದಿದ್ದರೆ ನಮ್ಮನ್ನು ಸಂಪರ್ಕಿಸಿದರೆ ನಾವು ಶಾಸ್ತ್ರೋಕ್ತವಾಗಿ ದೇವರ ಫೋಟೋ ವಿಸರ್ಜಿಸುವ ಕೆಲಸ ಮಾಡುತ್ತೇವೆ ಎಂದು ವೀರೇಶ್ ಹಿರೇಮಠ ಸ್ನೇಹಿತರು ಕೋರಿದ್ದಾರೆ.
ಒಟ್ಟಿನಲ್ಲಿ ದೇವರಿಗೆ ಆಗುತ್ತಿರುವ ಅವಮಾನ ತಡೆಯಬೇಕೆಂದು ನಿಶ್ಚಯಿಸಿ ಅವುಗಳನ್ನು ಸಂಗ್ರಹಿಸಿ ಶಾಸ್ತ್ರೋಕ್ತವಾಗಿ ನದಿ ದಂಡೆಯ ಮೇಲೆ ವಿಸರ್ಜಿಸುತ್ತಿರುವುದು ಶ್ಲಾಘನಿಯ. ದೇವರ ಫೋಟೋಗಳ ವಿಸರ್ಜನೆ ಕುರಿತು ಯಾರಿಗಾದರೂ ಮಾಹಿತಿ ಬೇಕಿದ್ದರೆ ವೀರೇಶ ಹಿರೇಮಠ ಅವರು ಮೊ.ನಂ.9481404055 ಸಂಪರ್ಕಿಸಬಹುದಾಗಿದೆ.
ಪ್ರಲ್ಹಾದ ಪೂಜಾರಿ, ಬೆಳಗಾವಿ
PublicNext
04/02/2025 06:07 pm