ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಸರ್ಕಾರಿ ಆಸ್ಪತ್ರೆಯ ಉನ್ನತೀಕರಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಚಿಕ್ಕೋಡಿ: ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿಗೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಭೂಮಿ ಪೂಜೆ ನೆರವೇರಿಸಿದರು.

ಚಾಲನೆ ನೀಡಿ ಬಳಿಕ ಮಾತನಾಡಿ ಅವರು ವಿಶೇಷ ಅನುದಾನದಲ್ಲಿ ಬಿಡುಗಡೆಯಾದ ಕಬ್ಬೂರ ಸಮುದಾಯ ಆರೋಗ್ಯ ಕೇಂದ್ರ ಕೊಠಡಿಗಳ ದುರಸ್ತಿ ಕಾರ್ಯ, ಕಾಂಪೌಂಡ ಹಾಗೂ ಎಸ್ ಟಿ ಪಿ ಟ್ಯಾಂಕ್ ನಿರ್ಮಾಣಕ್ಕೆ ಸಲುವಾಗಿ 87 ಲಕ್ಷ ರೂ ಹಾಗೂ ಜೈನಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕೊಠಡಿ ಸೇರಿದಂತೆ ಸುಣ್ಣ ಬಣ್ಣ ವಿದ್ಯುತ್ ಕಾಮಗಾರಿಗೆ 33 ಲಕ್ಷ ಬಿಡುಗಡೆ ಆಗಿದೆ ವೈದ್ಯಾಧಿಕಾರಿಗಳು ಸಾರ್ವಜನಿಕವಾಗಿ ಅನುಕೂಲವಾಗುವ ರೀತಿಯಲ್ಲಿ ಗುತ್ತಿಗೆಯದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳಲು ಸೂಚಿಸಿದರು.

ಕಬ್ಬೂರ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಾರ್ವಜನಿಕವಾಗಿ ಎಲ್ಲ ಸೌಲಭ್ಯಗಳನ್ನು ಒಳ್ಳೆಯ ರೀತಿಯಲ್ಲಿ ಒದಗಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.ಸದಾಶಿವ ಗೋರ್ಪಡೆ,ಹಿರಾ ಶುಗರ ನಿರ್ದೇಶಕ ಸುರೇಶ ಬೆಲ್ಲದ ,ಎಂ ಜಿ ಜೀವನಿ, ಮಹಾದೇವ ಪ್ರಧಾನಿ, ಬಸಲಿಂಗ ಕಾಡೆಶಗೋಳ, ಮಂಜು ಪಾಟೀಲ್, ಮಾರುತಿ ಕಲ್ಯಾಣ ಕರ, ಮಹಾದೇವ ಪಾಟೀಲ್, ಶ್ರೀಶೈಲ್ ತೀರದಾಳೆ, ಡಾ. ಕಣದಾಳೆ, ಡಾ. ಎಸ್ ಎಂ ಕರಗಾವಿ, ಡಾ. ಐ ಆರ್ ಕಡಕೋಳ, ವಿಜಯ್ ಕೋಟಿವಾಲೆ, ಲಕ್ಷ್ಮಿ ಮಜಲಟ್ಟಿ, ಸುರೇಶ್ ಗಾರ ಗೋಡೆ, ಅವಕ್ಕಾ ಜೋಗಿ, ಬಸವರಾಜ್ ಮಾಳಗಿ, ಅನಿಲ್ ಪಾಟೀಲ್, ಈರೇಗೌಡ ಕೆಳಗಿನಮನಿ, ರಾಯ್ ಗೌಡ ಕೆಳಗೆನಮನಿ, ಡಾಕ್ಟರ್, ಜಗದೀಶ್ ಸನದಿ, ತಮ್ಮಣ್ಣ ಗರಗುಡಿ, ದುಂಡಪ್ಪ ಕರಗುಡಿ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/02/2025 09:51 am

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ