ಬೆಳಗಾವಿ: ದೀಪ ಸ್ವರೂಪ ರೀತಿಯಲ್ಲಿ ಭಕ್ತೆಗೆ ಗುರು ರಾಯರು ದರ್ಶನ ನೀಡಿದ್ದು, ಬೆಳಗಾವಿಯಲ್ಲೊಂದು ಪವಾಡ ನಡೆದ ಘಟನೆ ನಡೆದಿದೆ.
ಕಲಿಯುಗದ ಕಾಮಧೇನು ಅಂತಲೇ ಕರೆಯಲ್ಪಡುವ ಗುರು ರಾಘವೇಂದ್ರ ಶ್ರೀಗಳು ಬೃಂದಾವನಸ್ಥರಾಗಿ ಶತಮಾನಗಳು ಕಳೆದರೂ ಅವರ ಪವಾಡಗಳು ನಡೆಯುತ್ತಿದೆ. ದೀಪಸ್ವರೂಪದಲ್ಲಿ ಭಕ್ತೆಗೆ ಗುರು ರಾಘವೇಂದ್ರ ಶ್ರೀಗಳು ದರ್ಶನ ನೀಡಿದ್ದಾರೆ. ಪೂಜ್ಯಾಯ ರಾಘವೇಂದ್ರಾಯ ಮಂತ್ರ ಹೇಳುವಾಗ ಯಾರೂ ನೂಕದೆ ತನ್ನಿಂದ ತಾನೇ ಮುಂದೆ ದೀಪ ಸರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆದಿದೆ.
ಪೂಜೆ ಮಾಡುವಾಗ ಸರಿದ ದೀಪ ನೋಡಿ ಮೊಬೈಲ್‌ನಲ್ಲಿ ರೆಕಾರ್ಡ್ ಆನ್ ಮಾಡಿ ಮಂತ್ರ ಹೇಳಿದಾಗಲೂ ಮತ್ತೆ ದೀಪ ಸರಿದಿದೆ. ಗುರ್ಲಾಪುರ ಗ್ರಾಮದ ಶಿವಲೀಲಾ ಕೇದಾರಿ ಎಂಬ ಭಕ್ತೆಯ ಮನೆಯಲ್ಲಿ ಈ ಪವಾಡ ನಡೆದಿದೆ.
PublicNext
04/02/2025 09:00 pm