ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುಂಭಮೇಳದಲ್ಲಿ ಮೃತರಾದ ನಾಲ್ವರ ಮೃತದೇಹ ಇಂದು ಬರಲಿವೆ: ಜಿಲ್ಲಾಧಿಕಾರಿ ಮಾಹಿತಿ

ಬೆಳಗಾವಿ: ಕುಂಭ ಮೇಳದಲ್ಲಿ ಸಾವನ್ನಪ್ಪಿದ ಬೆಳಗಾವಿಯ ನಾಲ್ವರ ಮೃತ ದೇಹ ಆಂಬ್ಯಲೆನ್ಸ್ ಮೂಲಕ ದೆಹಲಿಗೆ ಶಿಫ್ಟ್ ಮಾಡಿದ್ದೇವೆ. ಕರ್ನಾಟಕ ಭವನದ ಮೂಲಕ ಮರಣೋತ್ತರ ಪರೀಕ್ಷೆ ಸಿದ್ಧತೆ ಮಾಡಲಾಗಿದೆ. ದೆಹಲಿಯಿಂದ 3.30ಕ್ಕೆ ಪ್ಲೈಟ್ ಇದ್ದು, ಮೃತ ದೇಹಗಳು 5.30ಕ್ಕೆ ಬೆಳಗಾವಿಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಳಿಸಿದರು.

ಇಂದು ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ್ದಾರೆ. ಜಿಲ್ಲಾಡಳಿತದಿಂದಲೇ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಜತೆಗೆ ಮೃತರ ಕುಟುಂಬಗಳಿಗೆ ಪರಿಹಾರದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಇಂದು ನಡೆಯುವ ಸಚಿವ ಸಂಪುಟದಲ್ಲಿ ಪರಿಹಾರ ಘೋಷಣೆ ಮಾಡಬಹುದು ಎಂದರು.

ಮೃತ ನಾಲ್ವರ ಮರಣೋತ್ತರ ಪರೀಕ್ಷೆ ನಡೆದಿಲ್ಲ. ದೆಹಲಿಯಲ್ಲಿ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದೇವೆ.‌ ಸಮಯದ ಅಭಾವದಿಂದ ಮರಣೋತ್ತರ ಪರೀಕ್ಷೆ ರದ್ದಾದರೆ ಬೆಳಗಾವಿಯಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಿಕೊಳ್ಳಲು ಸಿದ್ಧತೆ ಮಾಡಿದ್ದೇವೆ ಎಂದು‌ ಡಿಸಿ‌ ಮೊಹಮ್ಮದ್ ರೋಷನ್ ತಿಳಿಸಿದರು.

Edited By : Manjunath H D
PublicNext

PublicNext

30/01/2025 04:12 pm

Cinque Terre

10.05 K

Cinque Terre

0

ಸಂಬಂಧಿತ ಸುದ್ದಿ