", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738218500-WhatsApp-Image-2025-01-30-at-11.57.32-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಬುಧವಾರ ಭೀಕರ ಕಾಲ್ತುಳ ಸಂಭಿಸಿದೆ. ಈ ಕಾಲ್ತುಳಿತದಲ್ಲಿ ...Read more" } ", "keywords": " Belgaum, Kumbh Mela, Wedding Plans, Tragic Death, Young Woman, Karnataka News, Belgaum News, Kumbh Mela Tragedy, Indian Festivals.,Belgaum,Crime", "url": "https://publicnext.com/node" }
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಬುಧವಾರ ಭೀಕರ ಕಾಲ್ತುಳ ಸಂಭಿಸಿದೆ. ಈ ಕಾಲ್ತುಳಿತದಲ್ಲಿ ಬೆಳಗಾವಿ ನಾಲ್ವರು ದುರ್ಮರಣ ಹೊಂದಿದ್ದು, ಮದುವೆ ಕನಸು ಕಾಣುತ್ತಿದ್ದ ಯುವತಿ ಕೂಡಾ ಈ ಘಟನೆಯಲ್ಲಿ ಮಸಣ ಸೇರಿದ್ದಾಳೆ.
ಬೆಳಗಾವಿಯಿಂದ ಸಾವಿರಾರು ಜನರು ಕುಂಭಮೇಳಕ್ಕೆ ಹೋಗಿದ್ದರು. ಅದರಲ್ಲಿ ಬೆಳಗಾವಿ ಸಾಯಿರಥ ಟ್ರಾವೆಲ್ಸ್ ಮೂಲಕ ಎರಡು ಬಸ್ಸಿನಲ್ಲಿ 60 ಜನರು ಜನವರಿ 26ರಂದು ಮಧ್ಯಾಹ್ನ 1 ಗಂಟೆಗೆ ಪ್ರಯಾಣ ಬೆಳೆಸಿದ್ದರು. ಮಂಗಳವಾರ ರಾತ್ರಿ ಯಾರ್ಥಿಗಳು ಕುಂಭಮೇಳಕ್ಕೆ ಹೋಗಿ ತಲುಪಿದ್ದರು. ಬುಧವಾರ ಮೌನಿ ಅಮಾವಾಸ್ಯೆ ನಿಮಿತ್ತ ಹೆಚ್ಚಾದ ಜನದಟ್ಟಣೆಯಿಂದ ಸಂಭವಿಸಿದ ಕಾಲ್ತುಳಿದಲ್ಲಿ ತಾಯಿ, ಮಗಳು ಸೇರಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ.
ಹೀಗೆ ಸಾವನ್ನಪ್ಪಿದ ನಾಲ್ವರಲ್ಲಿ ಮೇಘಾ ಅತ್ತರವಾಟ (24) ಕೂಡ ಓರ್ವಳು. ಈ ಮೇಘಾ ಪದವೀಧರೆ. ಒಂದೂವರೆ ವರ್ಷದಿಂದ ಸ್ವಂತ ಅಂಗಡಿ ನಡೆಸುತ್ತಿದ್ದಳು. ಆರು ತಿಂಗಳ ಹಿಂದೆ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದ್ದಳು. ಇವಳಿಗೆ ಮಾರ್ಚ್ ನಲ್ಲಿ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮದುವೆ ಆದ್ಮೇಲೆ ಪ್ರಯಾಗ್ ರಾಜ್‌ಗೆ ಹೋಗಲು ಆಗುವುದಿಲ್ಲ. ಒಬ್ಬಳೆ ಆದ್ರು ನಾನು ಹೋಗುತ್ತೇನೆ ಎಂದು ಹಠ ಹಿಡಿದ ಮಗಳನ್ನು ಹೇಗೆ ಕಳಿಸುವುದು ಎಂದು ತಂದೆ ದೀಪಕ್ ಅವರು ತನ್ನ ಪತ್ನಿ ಜ್ಯೋತಿಗೆ ತಾಯಿ ಮಗಳು ಹೋಗಿ ಬರುವಂತೆ ಹೇಳಿದ್ದಾನೆ.
ಮಂಗಳವಾರ ರಾತ್ರಿ ಕುಂಭಮೇಳಕ್ಕೆ ತಲುಪಿದ ಬಳಿಕ ಪುಣ್ಯ ಸ್ಥಾನಕ್ಕೆಂದು ತೆರಳಿದ 60 ಜನರಲ್ಲಿ 56 ಜನ ಸ್ಥಾನಕ್ಕಾಗಿ ಮುಂದೆ ಹೋಗುತ್ತಾರೆ. ಆದರೆ ನಾಲ್ವರು ಹಿಂದೆಉಳಿದುಕೊಳ್ಳುತ್ತಾರೆ. ಈ ಘಟನೆಗೂ ಮುಂಚೆ ಹಿಂದೆ ಉಳಿದಾಗ ಮೇಘಾ ಒಂದು ಲೈವ್ ವಿಡಿಯೋ ಮಾಡಿ ಅಲ್ಲಿಯ ಸ್ಥಿತಿ ಬಗ್ಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾಳೆ. ಲೈವ್ ಮಾಡುವಾಗಲೇ ತಂದೆ ದೀಪಕ್ ಕರೆ ಮಾಡಿದಾಗ ಲೈವ್ ಕಟ್ ಮಾಡಿ ತಂದೆ ಜೊತೆ ಮಾತಾಡಿದ್ದಾಳೆ. ಕರೆ ಕಟ್ಟ ಆದ ಕೆಲವೇ ಗಂಟೆಯಲ್ಲಿ ಕಾಲ್ತುಳಿ ಆಗುತ್ತೆ. ಕಾಲ್ತುಳಿತದಲ್ಲಿ ಸ್ಥಳದಲ್ಲೆ ಮೇಘಾ ಹಾಗೂ ಆಕೆಯ ತಾಯಿ ಜ್ಯೋತಿ ಸೇರಿ ಬೆಳಗಾವಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.
ಮೇಘಾ ರೀಲ್ಸ್ ಮಾಡುವ ಆಸಕ್ತಿ ಹೊಂದಿದ್ದಳು. ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋದರೂ ಅಲ್ಲಿಯ ವಾಸ್ತವ ಸ್ಥಿತಿ ವಿವರಣೆ ನೀಡುತ್ತಿದ್ದಳು. ಹಾಗೆ ಅಂದು ಕೂಡಾ ಲೈವ್ ಬಂದು ಮಾಹಿತಿ ನೀಡಿದ್ದಾಳೆ.
ಒಟ್ಟಿನಲ್ಲಿ ಹೆಂಡತಿ, ಮಗಳ ಸಾವಿನ ಸುದ್ದಿಯಿಂದ ಗಂಡ ದೀಪಕ್ ಏಕಾಂಗಿಯಾಗಿದ್ದು, ಆತನ ದುಃಖ ಹೇಳತಿರದ್ದಾಗಿದೆ. ಅವರ ಜೊತೆ ನಾನು ಹೋಗಬೇಕಿತ್ತು ಎಂದು ಕಣ್ಣಿರುಡುತ್ತಿದ್ದಾರೆ.
PublicNext
30/01/2025 11:59 am