ಚಿಕ್ಕೋಡಿ :ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವಾಹನ ಡಿಕ್ಕಿ ಹೊಡೆಸಿ ಯುವಕನೋರ್ವನ ಕೊಲೆ ಮಾಡಿದ ಆರೋಪದಲ್ಲಿ ರಾಯಬಾಗ ಪೊಲೀಸರು ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2017 ರಲ್ಲಿ ಆರೋಪಿ ಅರೀಫ್ ಚೌಧರಿ ತಂದೆ ಇಬ್ರಾಹಿಂ ಚೌಧರಿಯನ್ನು ಸಾವಿಗೀಡಾದ ಸಮೀರ್ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಿದ್ದರು. ಈ ಸಂಬಂಧ ಜೈಲು ವಾಸದಲ್ಲಿದ್ದ ಸಮೀರ್ ಷರತ್ತು ಬದ್ಧ ಜಮೀನಿನ ಮೇಲೆ ಹೊರಗಡೆ ಬಂದಿದ್ದ. ಜ.28 ರಂದು ರಾಯಬಾಗ ಠಾಣೆ ವ್ಯಾಪ್ತಿಯ ಕಂಚಕರವಾಡಿ ಹತ್ತಿರದ ರಾಯಬಾಗ ರಸ್ತೆಯಲ್ಲಿ ಎರಡು ವಾಹನಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಈ ವೇಳೆ ದ್ವಿಚಕ್ರ ವಾಹನದ ಮೇಲೆ ರಾಯಭಾಗದಿಂದ ಹೋಗುತ್ತಿದ್ದ ಸಮೀರ್ ಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಮೃತಪಟ್ಟಿದ್ದಾನೆ. ಹಾಗೂ ಫಿರೋಜ್ ಗೆ ಗಾಯವಾಗಿವೆ. ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ಸ್ವಯಂ ಪ್ರೇರಿತವಾಗಿ ರಾಯಬಾಗ ಠಾಣೆಗೆ ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ..
ವಾಹನ ಅಪಘಾತದಲ್ಲಿ ಸಮೀರ್ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ ರಾಯಬಾಗ ಪೊಲೀಸರು ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೋಟಕ್ಕೆ ಇದು ಅಪಘಾತ ಪ್ರಕರಣವಾಗಿದ್ದರೂ, ಇದೊಂದು ವ್ಯವಸ್ಥಿತ ಕೊಲೆ ಸಂಚು ಇರಬಹುದು ಎಂದು ಮೀರಜನ ಗಾಂಧಿಚೌಕ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯವಸ್ಥಿತ ಕೊಲೆ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿ
PublicNext
30/01/2025 01:23 pm