ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಡೆದ ಕಾತ್ತುಳಿದಲ್ಲಿ ಸಾವನ್ನಪ್ಪಿದ್ದ ಬೆಳಗಾವಿ ನಾಲ್ವರಲ್ಲಿ ಇಬ್ಬರ ಮೃತದೇಹ ಆಗಮಿಸಿದ್ದು, ಮೃತ ಅರುಣ ಕೋರ್ಪಡೆ ಪತ್ನಿ ಕಾಂಚನಾ ಕೋರ್ಪಡೆ ಘಟನೆಯ ಭಯಾನಕತೆ ವಿವರಿಸಿದ್ದಾಳೆ.
ದೆಹಲಿಯಿಂದ ಪತಿಯ ಮೃತದೇಹ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಕಾಂಚನಾ ಮಾತನಾಡಿದ್ದಾರೆ. ಕಾಲ್ತುಳಿತ ದುರಂತದಲ್ಲಿ ನನಗೂ ಗಾಯವಾಗಿದೆ. ಪವಿತ್ರ ಸ್ನಾನಕ್ಕೆಂದು ಹೋದಾಗ ಏಕಾಏಕಿ ಜನಸಂದಣಿ ಹೆಚ್ಚಾಗಿ ಓಡೋಡಿ ಬಂದು ಒಬ್ಬರ ಮೇಲೆ ಒಬ್ಬರು ಬೀಳತೊಡಗಿದರು. ಆ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದೇವು, ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿತ್ತು,
ಪ್ರಜ್ಞೆ ಬಂದಾಗ ಪತಿ ಸಾವನ್ನಪ್ಪಿರುವ ಬಗ್ಗೆ ತಿಳಿಯಿತು, ನನ್ನ ಸ್ನೇಹಿತೆ ಕೂಡ ತೀರಿಕೊಂಡಳು ಎಂದು ನೋವಿನಲ್ಲಿ ಕಣ್ಣೀರಿಡುತ್ತಾ ಅರುಣ ಅವರ ಪತ್ನಿ ಕಾಂಚನಾ ಘಟನೆ ಭಯಾನಕತೆ ವಿವರಿಸಿದ್ದಾರೆ.
PublicNext
30/01/2025 08:41 pm