", "articleSection": "Politics,Crime,Law and Order,Accident,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738160918-A10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬೆಳಗಾವಿ ವಡಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದು, ಮೃತರ ಮನೆಗೆ...Read more" } ", "keywords": "Maha Kumbh Mela Prayagraj, Kumbh Mela Uttar Pradesh, Prayagraj Kumbh Mela, Maha Kumbh Mela 2025, Kumbh Mela India, Prayagraj festival, Hindu pilgrimage, Ganges River bathing, Mauni Amavasya, Kumbh Mela significance, Kumbh Mela dates, Kumbh Mela history.,Belgaum,Politics,Crime,Law-and-Order,Accident,News,Public-News", "url": "https://publicnext.com/node" }
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬೆಳಗಾವಿ ವಡಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದು, ಮೃತರ ಮನೆಗೆ ಸಂಸದ ಜಗದೀಶ್ ಶೆಟ್ಟರ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಂಭಮೇಳಕ್ಕೆ ಹೋಗಿದ್ದ ಬೆಳಗಾವಿಯ ನಾಲ್ಕು ಜನ ಮೃತ ಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಇದು ಬಹಳ ಖೇದಕರವಾದ ಘಟನೆ, ಈ ರೀತಿ ಆಗಬಾರದಿತ್ತು. ಆದರೆ, ಕಾಲ್ತುಳಿತದಲ್ಲಿ ಈ ಕಹಿ ಘಟನೆ ಆಗಿದೆ. ಈ ದುರ್ಘಟನೆ ಆದ ತಕ್ಷಣ ನಾನು ಬೆಳಗಾವಿ ಡಿಸಿ ಹಾಗೂ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿ ಇದ್ದೆ.
ನಮ್ಮ ಜಿಲ್ಲಾಡಳಿತ ಅಲ್ಲಿಯ ಜಿಲ್ಲಾಡಳಿತದ ಜೊತೆ ಸಂಪರ್ಕದಲ್ಲಿದೆ. ಈ ಘಟನೆಯಲ್ಲಿ ಇನ್ನೂ 8-10 ಜನ ಮಿಸ್ಸಿಂಗ್ ಆಗಿರುವ ಮಾಹಿತಿ ಇದೆ. ಬೆಳಗಾವಿ ಉತ್ತರ ಮತ ಕ್ಷೇತ್ರದ ಎರಡು ಹಾಗೂ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಎರಡು ಜನರ ಸಾವು ಸಂಭವಿಸಿದೆ. ಬೆಳಗಾವಿಯಿಂದ ವಿಶೇಷ ಅಧಿಕಾರಿಯನ್ನು ಕುಂಭಮೇಳಕ್ಕೆ ಕಳುಹಿಸಿದ್ದಾರೆ. ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಂದ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಲಾಗಿದೆ. ಅಲ್ಲಿಂದ ಮೃತದೇಹ ತರಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
PublicNext
29/01/2025 07:58 pm