", "articleSection": "Crime,Law and Order,Religion", "image": { "@type": "ImageObject", "url": "https://prod.cdn.publicnext.com/s3fs-public/286525-1738326560-WhatsApp-Image-2025-01-31-at-5.59.09-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ತಾಯಿ- ಮಗಳು ಜ್ಯೋತಿ ಹತ್ತರವಾಟ ...Read more" } ", "keywords": "Belagavi, Mother-Daughter, Dead Bodies, Faithful Dog, Loyal Pet, Tragic Incident, Karnataka News, Belagavi News, Animal Loyalty.,Belgaum,Crime,Law-and-Order,Religion", "url": "https://publicnext.com/node" }
ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ತಾಯಿ- ಮಗಳು ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಅವರ ಅಂತ್ಯ ಸಂಸ್ಕಾರ ಶಹಾಪುರ ಸ್ಮಶಾನದಲ್ಲಿ ನೆರವೇರಿದ್ದು, ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದರೆ, ಅವರ ನೆಚ್ಚಿನ ನಾಯಿ ಕೂಡ ಗೋಳಾಡಿತು.
ಪುಣ್ಯಸ್ನಾನಕ್ಕೆಂದು ಹೋದ ತಾಯಿ, ಮಗಳು ಶವವಾಗಿ ಬಂದಿದ್ದು ಕಂಡು ಕುಟುಂಬದವರು ದುಃಖದಲ್ಲಿ ಮುಳುಗಿದ್ದರು. ಅವರ ಮನೆ ನಾಯಿಯ ಗೋಳಾಟವೂ ನೆರೆದವರ ಕಣ್ಣಲ್ಲಿ ನೀರು ತರಿಸಿತು. ಅವರ ನೆಚ್ಚಿನ ಶ್ವಾನವೂ ಇಬ್ಬರ ಶವದ ಮುಂದೆ ನಿಂತು ಗೋಗರೆಯಿತು. ಅವರು ತೀರಿಕೊಂಡ ಸುದ್ದಿ ತಿಳಿದಾಗಿನಿಂದಲೂ ನಾಯಿ ಮೌನಕ್ಕೆ ಶರಣಾಗಿತ್ತು.
PublicNext
31/01/2025 05:59 pm