ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: 'ಡಿಕೆಶಿ ಮುಂದಿನ ಸಿಎಂ' ಎಂದು ಹೇಳುವುದರಲ್ಲಿ ತಪ್ಪೇನಿಲ್ಲ - ಸತೀಶ್ ಜಾರಕಿಹೊಳಿ

ಚಿಕ್ಕೋಡಿ: ಡಿಕೆಶಿ ಅಭಿಮಾನಿಗಳು ಡಿಕೆಶಿ ಮುಂದಿನ ಸಿಎಂ ಎಂದು ಹೇಳುವದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಡಿಕೆಶಿ ಆಪ್ತ ಶಾಸಕರಿಂದಮುಂದಿನ ಸಿಎಂ ಡಿಕೆಶ ಎಂದು ಹೇಳಲು ಯಾವುದೇ ಕಾಯ್ದೆ ಇಲ್ಲ. ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಪಾರ್ಟಿಗೆ ಡ್ಯಾಮೇಜ್ ಆಗಬಾರದಂಥ ಹೇಳಿಕೆ ನೀಡಿಲ್ಲ ಎಂದರು.

ನಾನು ಪ್ರಯಾಗರಾಜ್ ಗೆ ಹೋಗುವುದಿಲ್ಲ. ಇಲ್ಲೆ ಇರುವ ಕೃಷ್ಣಾ, ಹೀರಣ್ಯಕೇಶಿ ನದಿಗಳಲ್ಲೆ ಸ್ನಾನ ಮಾಡುತ್ತೇನೆ ಎಂದರು. ದೆಹಲಿಗೆ ಹೋಗುತ್ತೇವೆ ಎಂದು ನಾನು ಹೇಳಿಯೇ ಇಲ್ಲ. ದಲಿತ ಸಚಿವರು ಹೋಗುವುದು ಗೊತ್ತಿಲ್ಲ‌. ಅವರು ಹೋಗುವದಾದರೆ ಹೋಗಬಹುದು ಎಂದರು.

Edited By : Shivu K
PublicNext

PublicNext

04/02/2025 09:07 pm

Cinque Terre

20.64 K

Cinque Terre

2

ಸಂಬಂಧಿತ ಸುದ್ದಿ