ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮದ್ಯದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ - ಹತ್ಯೆಯ ವಿಡಿಯೋ ಸಂಬಂಧಿಕರಿಗೆ ಕಳಿಸಿದ ಕ್ರೂರಿ

ಬೆಳಗಾವಿ: ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ.

ಕಬ್ಬು ಕಟಾವು ಗ್ಯಾಂಗ್ ಜೊತೆ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಬಾಲಾಜಿ ಕಬಲಿ (35) ಎಂಬಾತನಿಂದ ಅಮಾನುಷ ಕೃತ್ಯ ನಡೆದಿದ್ದು, ಮಿರಾಬಾಯಿ ಕಬಲಿ (25) ಕೊಲೆಯಾದ ಮಹಿಳೆ ಆಗಿದ್ದಾಳೆ.‌ ಕೊಲೆ ಮಾಡುವ ಲೈವ್ ವಿಡಿಯೋ ಮಾಡಿ ಪತ್ನಿ ಸಂಬಂಧಿಗಳಿಗೆ ಆರೋಪಿ ಪತಿ ಕಳುಹಿಸಿದ್ದಾನೆ.‌ ಸದ್ಯ ಲೈವ್ ವಿಡಿಯೋ ಮಾಡಿಕೊಂಡಿದ್ದ ಮೊಬೈಲ್ ಹಾಗೂ ಆರೋಪಿಯನ್ನು ಗೋಕಾಕ್ ಗ್ರಾಮೀಣ ಪೋಲಿಸರು ವಶಕ್ಕೆ ಪಡೆದಿದ್ದಾರೆ.‌

ಕೊಲೆಯಾಗಿ ಬಿದ್ದ ತಾಯಿಯ ಮೊಲೆ ಹಾಲು ಕುಡಿಯಲು 2 ವರ್ಷದ ಮಗು ಪರದಾಟ ನಡೆಸಿದ್ದು, ತಾಯಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.‌

Edited By : Ashok M
PublicNext

PublicNext

05/02/2025 09:48 am

Cinque Terre

14.69 K

Cinque Terre

0

ಸಂಬಂಧಿತ ಸುದ್ದಿ