", "articleSection": "Crime,Law and Order,Government,News,Public News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1738652699-V1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "LaxmanChikkodi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಭಾಗ: ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಕುಟುಂಬ ನಿರ್ವಹಣೆಗಾಗಿ ಸಾಲ ಪಡೆದ ರೈತರು ದುಬಾರಿ ಬಡ್ಡಿ ಕಟ್ಟಲಾ...Read more" } ", "keywords": ",Belgaum,Crime,Law-and-Order,Government,News,Public-News,Agriculture", "url": "https://publicnext.com/node" }
ರಾಯಭಾಗ: ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಕುಟುಂಬ ನಿರ್ವಹಣೆಗಾಗಿ ಸಾಲ ಪಡೆದ ರೈತರು ದುಬಾರಿ ಬಡ್ಡಿ ಕಟ್ಟಲಾರದೇ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಜೀವ ಕಳೆದುಕೊಳ್ತಿದ್ದಾರೆ. ಇದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಇಂದು ಸುಗ್ರೀವಾಜ್ಞೆ ಜಾರಿ ಮಾಡಲು ರಾಜ್ಯಪಾಲರ ಅಂತಿಮ ಮುದ್ರೆಯ ದಾರಿ ಕಾಯುತ್ತಿದೆ.ಆದ್ರೆ ಅಷ್ಟರಲ್ಲಿ ಬೆಳಗಾವಿಯಲ್ಲಿ ಮತ್ತೊಂದು ದುರಂತ ನಡೆದಿದ್ದು ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬ ರೈತ ಬಲಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದ ರೈತ ಶಿವನಪ್ಪ ರಾವಜಪ್ಪ ಧರ್ಮಟ್ಟಿ (66) ಮೃತ ರೈತ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪತ್ನಿಯ ಆಸ್ಪತ್ರೆ ಖರ್ಚಿಗಾಗಿ ಮಾಡಿದ ಫೈನಾನ್ಸ್ ಸಾಲ ಈ ರೈತನನ್ನ ಬಲಿ ಪಡೆದಿದೆ. ರೈತ ಶಿವಪ್ಪ ಐ.ಡಿ.ಎಫ್.ಸಿ.ಬ್ಯಾಂಕ್ ಹಾಗೂ ಅಪೆಕ್ಸ್ ಫೈನಾನ್ಸ್ ರಬಕವಿ , ವೇಡಿಟರ್ ಫೈನಾನ್ಸ್ ಚಿಕ್ಕೋಡಿ ಇವರ ಬಳಿ ಸುಮಾರು 6 ಲಕ್ಷ ಸಾಲ ಪಡೆದಿದ್ದ. ಆದ್ರೆ ಪತ್ನಿ ಆಸ್ಪತ್ರೆ ಖರ್ಚಿನಿಂದ ಹಣ ತುಂಬಲು ವಿಳಂಬವಾದ ಕಾರಣ ಫೈನಾನ್ಸ್ ಕಿರುಕುಳ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರುಕುಳ ಕೊಟ್ಟ ಫೈನಾನ್ಸ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರೈತ ಮುಖಂಡರು ಮನವಿ ಮಾಡಿದ್ದಾರೆ.
Kshetra Samachara
04/02/2025 12:35 pm