ಬೆಳಗಾವಿ: ಪಾಲಿಕೆಯ ಆಯುಕ್ತರ ಜೊತೆಯಲ್ಲಿ ಮಾಜಿ ಮೇಯರ್ಗಳ ಹಾಗೂ ಮಾಜಿ ನಗರ ಸೇವಕರ ಸಭೆ ನಡೆಸಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳಿಗೆ ಆಯುಕ್ತರು ಸಕಾರಾತ್ಮಕ ಸ್ಪಂದನೆ ನೀಡಿದ್ದೇವೆ.
ಇಂದು ನಗರದ ಆಯುಕ್ತರ ಕಚೇರಿಯಲ್ಲಿ ಅನೇಕ ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಇಂದು ನಡೆದ ಸಭೆಯಲ್ಲಿ ಹಿಡಕಲ್ ಡ್ಯಾಮ್‌ನಿಂದ ನಿಯಮಾನುಸಾರವಾಗಿ ಪಾಲಿಕೆಗೆ ಬರಬೇಕಾದ ನೀರು ಬರುತ್ತುದೆಯಾ? ಕೈಗಾರೀಕರಣಕ್ಕೆ ನೀರಿನ ಪೂರೈಕೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆಯೇ ಎಂಬ ವಿಚಾರ ಕೇಳಿದ್ದು, ಕೈಗಾರಿಕಾ ಬಳಕೆಗೆ ನೀರನ್ನು ಎಲ್ಲಿಂದ ನೀಡುತ್ತಿದ್ದಾರೆ? ಹಿಡಕಲ್ ಥರ್ಡ್ ಸ್ಟೇಜ್ ಕುಡಿಯುವ ನೀರಿಗಾಗಿಯೇ ಇತ್ತು. ಅಲ್ಲಿ ಏನಾದರೂ ಅಡ್ಡಿಯಾಗಿದೆಯೇ? ನಮಗೇನಾದರೂ ಕಡಿಮೆ ನೀರು ಬಿಡುಗಡೆ ಆಗುತ್ತಿದೆಯೇ? ಎಂದು ಸಂಬಂಧಿಸಿದ ನೀರಾವರಿ ಅಧಿಕಾರಿಗಳಿಂದ ನಾನು ಮಾಹಿತಿ ಪಡೆಯುವೆ ಎಂದು ಪಾಲಿಕೆ ಆಯುಕ್ತೆ ಶುಭ ಅವರು ತಿಳಿಸಿದ್ದಾರೆ.
ಇನ್ನು ಈ ಆಸ್ತಿಯ ಕುರಿತಾಗಿ ಸಾರ್ವಜನಿಕರು ಎದುರಿಸುತ್ತಿರುವ ಕೆಲ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಅದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತರು, ಇ-ಆಸ್ತಿ ಸೇವೆಯನ್ನು ನಾವು ಏಳು ದಿವಸದಲ್ಲಿ ನೀಡಬೇಕು, ಸಾರ್ವಜನಿಕರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಕಂದಾಯ ವಿಭಾಗದ ಸಹಾಯವಾಣಿ ಇದೆ. ಅದಕ್ಕೆ ಕರೆ ಮಾಡಬಹುದು. ಅಥವಾ ನೇರವಾಗಿ ನನಗೆ ಬಂದು ದೂರು ನೀಡಬಹುದು. ಏಳು ದಿವಸ ಇ-ಖಾತೆ, ಹಾಗೂ 45 ದಿವಸ ಖಾತೆ ಬದಲಾವಣೆಗೆ ಸಮಯ ನೀಡಿದ್ದೇವೆ. ಒಂದು ವೇಳೆ ನಿಗದಿತ ಕಾಲಾವಧಿಯಲ್ಲಿ ಇ-ಆಸ್ತಿ ಆಗದಿದ್ದರೆ ತಾವು ದೂರು ನೀಡಬಹುದು. ಇನ್ನು ನಗರದ ಕುಡಿಯುವ ನೀರು ಎಂಟು ದಿನಕ್ಕೊಮ್ಮೆ ಬರುವದನ್ನು ಎಲ್ಲರೊಂದಿಗೆ ಚರ್ಚಿಸಿ ಆದಷ್ಟು ಬೇಗ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದಿದ್ದಾರೆ.
ನಾವು ಕೂಡಾ ಅವರು ಚರ್ಚಿಸಿದ ವಿಷಯಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಅವರು ಸೂಚಿಸಿದ ಕೆಲ ಸಮಸ್ಯಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತೆ ಶುಭ ಬಿ ಅವರು ತಿಳಿಸಿದ್ದಾರೆ.
PublicNext
04/02/2025 09:42 pm