ಬೆಳಗಾವಿ: ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ ಎಂದು ಜಾಗೃತಿ ಮೂಡಿಸಿ ಸುಸ್ತಾದ ಬೆಳಗಾವಿ ಪೊಲೀಸರು ಇದೀಗ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರ ಕೈಯಲ್ಲಿ ಫಲಕ ಕೊಟ್ಟು ಜಾಗೃತಿಗೆ ನಿಲ್ಲಿಸಲಾಗುತ್ತಿದೆ. ಹೆಲ್ಮೆಟ್ ಧರಿಸವರಿಗೆ ದಂಡ ಹಾಕಿ ನೋಡಿದರು, ಗುಲಾಬಿ ಹೂವು ಕೊಟ್ಟು ನೋಡಿದರು. ಬೇರೆ ಬೇರೆ ರೀತಿ ಜಾಗೃತಿ ಮೂಡಿಸಿ, ಮನವಿ ಮಾಡಿ ನೋಡಿದರು. ಆದರೂ ಜನರಲ್ಲಿ ಜಾಗೃತಿ ಮೂಡದ್ದರಿಂದ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವಾರ ನಾಲ್ಕಾರು ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಧರಿಸದ್ದರಿಂದ ದಂಡ ವಿಧಿಸಲಾಗಿತ್ತು. ಇದೀಗ, ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಬಂದವರನ್ನು ನಿಲ್ಲಿಸಿ ಅವರ ಕೈಯಲ್ಲಿ, ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ, ಇಲ್ಲವಾದಲ್ಲಿ ನಮ್ಮ ಹಾಗೆ ಜಾಗೃತಿ ಮೂಡಿಸಬೇಕಾಗುತ್ತದೆ ಎನ್ನುವ ಫಲಕವನ್ನು ಹಿಡಿದು ನಿಲ್ಲಿಸಲಾಗುತ್ತಿದೆ.
ಪೊಲೀಸರ ಹೊಸ ಕ್ರಮ ಯಾವ ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತದೆ ಕಾದು ನೋಡಬೇಕಿದೆ.
Kshetra Samachara
03/02/2025 04:18 pm