ಚಿಕ್ಕೋಡಿ: ಡ್ರೈನೇಜ್ ನಲ್ಲಿ ಬಿದ್ದ ಸಾಕು ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಯವರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆದ್ದಾರೆ.
ಚಿಕ್ಕೋಡಿ ಪಟ್ಟಣದ ಗಣೇಶ ನಗರದ ಡ್ರೈನೇಜ್ ನಲ್ಲಿ ಸಾಕು ನಾಯಿಯ ಒಂದು ಬಿದ್ದು ನರಳಾಡುತ್ತಿತ್ತು. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಗ್ಗ, ಪ್ಲಾಸ್ಟಿಕ್ ಬುಟ್ಟಿ ಸಹಾಯದಿಂದ ನಾಯಿಯನ್ನು ಜೀವಂತವಾಗಿ ಹೊರತೆಗೆದು ಮಾಲೀಕ ನೀರಜ್ ಕೊಹ್ಲಿ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆರ್.ಆರ್.ಪಾಟೀಲ,ಎಂ.ಎಸ್.ನದಾಫ್,ಎಂ. ಎನ್.ಬಿಳವರಿ,ಎಂ.ಜಿ.ಸನದಿಯವರು ಸೇರಿದಂತೆ ಇನ್ನಿತರ ಅಗ್ನಿಶಾಮಕದಳದ ಸಿಬ್ಬಂದಿಯವರ ಭಾಗಿಯಾಗಿದ್ದರು.
Kshetra Samachara
04/02/2025 09:36 am