", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/39031220250204015737filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Nadaf bailhongal" }, "editor": { "@type": "Person", "name": "9741588525" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೈಲಹೊಂಗಲ: ಸೂರ್ಯ ನಮಸ್ಕಾರವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸ’ ಎಂದು ಯೋಗ ಗುರು ಡಾ ಸಂಗಮೇಶ ಸವದತ್ತಿಮಠ ಹೇ...Read more" } ", "keywords": "Node,Belgaum,Cultural-Activity", "url": "https://publicnext.com/node" }
ಬೈಲಹೊಂಗಲ: ಸೂರ್ಯ ನಮಸ್ಕಾರವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸ’ ಎಂದು ಯೋಗ ಗುರು ಡಾ ಸಂಗಮೇಶ ಸವದತ್ತಿಮಠ ಹೇಳಿದರು.
ಅವರು ಮಂಗಳವಾರ ಪಟ್ಟಣದ ಹಳೇ ಪ್ರೇರಣಾ ಶಾಲೆ ಆವರಣದ ಗುರುಕುಲ ಅರೋಗ್ಯಾಲಯ ಶಾಲೆಯ ವೈದ್ಯ ಯೋಗ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ದ ವತಿಯಿಂದ ಆಯೋಜಿಸಿದ ರಥಸಪ್ತಮಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ 111 ಸೂರ್ಯ ನಮಸ್ಕಾರ ಹಾಗೂ ಅಗ್ನಿ ಹೊತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ಸೂರ್ಯದೇವ ಕಣ್ಣಿಗೆ ಗೋಚರಿಸುವ ದೇವನಾಗಿದ್ದು, ರಥ ಸಪ್ತಮಿ ದಿನದಂದು ಅವನ ಪ್ರಥಮ ಕಿರಣ ದೇಹದ ಮೇಲೆ ಬೀಳುವುದರಿಂದ ಉಲ್ಲಾಸ ಹಾಗೂ ಉತ್ತಮ ಆರೋಗ್ಯ ನೀಡುತ್ತದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲೂಕು ಅಧ್ಯಕ್ಷ ಕಾಶೀನಾಥ ಬಿರಾದಾರ, ಶಿಕ್ಷಕ ಶಿವಾನಂದ ಕುಡಸೋಮನ್ನವರ, ಮಲ್ಲಿಕಾರ್ಜುನ ಭರಮನ್ನವರ, ಬಿ ಎಂ ಪಾಟೀಲ, ಮಹೇಶ ವಾಲಿ, ಪ್ರಕಾಶ ಬೇಟಗೇರಿ, ಸುರೇಶ ಬೈಲಪ್ಪನವರ, ಆನಂದ ಯಲಿಗಾರ, ಮಹಾಂತೇಶ ಹರಕುಣಿ, ರಾಜು ಹರಕುಣಿ, ಸಿದ್ದಪ್ಪ ಉಪ್ಪಾರ, ರಾಜು ಬಡಿಗೇರ ಹಾಗೂ ಯೋಗಪಟುಗಳು ಇದ್ದರು.
Kshetra Samachara
04/02/2025 01:59 pm