", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/52563-1738747033-c995d0ad-9d78-4ddd-956f-ae88a01371ff.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ವಾವಲಂಬನೆ ಪರಿಕಲ್ಪನೆ ಸದುದ್ದೇಶದಿಂದ ಆರಂಭಗೊಂಡಿರುವ ಸ್ವದೇಶಿ ಮೇಳದ ಮೊದಲ ದಿನವಾದ ಇಂದು ಬೆಳಿ...Read more" } ", "keywords": "Swadeshi Mela in Hubli: Auspicious start with cow and Ganapati puja,Hubballi-Dharwad,News", "url": "https://publicnext.com/node" }
ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ವಾವಲಂಬನೆ ಪರಿಕಲ್ಪನೆ ಸದುದ್ದೇಶದಿಂದ ಆರಂಭಗೊಂಡಿರುವ ಸ್ವದೇಶಿ ಮೇಳದ ಮೊದಲ ದಿನವಾದ ಇಂದು ಬೆಳಿಗ್ಗೆ ಗಣಪತಿ ಹಾಗೂ ಗೋ ಮಾತೆಯ ಪೂಜೆಯೊಂದಿಗೆ ಮೇಳದ ಶುಭಾರಂಭ ಮಾಡಲಾಯಿತು.
ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯಿಸುವುದರ ಜೊತೆಗೆ ಅಗತ್ಯತೆಯನ್ನು ಮನವರಿಕೆ ಮಾಡುವ ಸದುದ್ದೇಶದಿಂದ ಇದೇ ಫೆಬ್ರವರಿ 05ರಿಂದ 09ರ ವರೆಗೆ ಹುಬ್ಬಳ್ಳಿಯ ವಿದ್ಯಾನಗರದ ಹೊಸ ಕೋರ್ಟ್ ಹಿಂಭಾಗದಲ್ಲಿರುವ ಕಲ್ಲೂರು ಲೇಔಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಗೋ ಪೂಜೆ ಹಾಗೂ ಗಣಪತಿ ಪೂಜೆಯ ಮೂಲಕ ಶುಭಾರಂಭ ಮಾಡಲಾಯಿತು.
ಸ್ವದೇಶಿ ಜಾಗರಣ ಮಂಚ್-ಕರ್ನಾಟಕ ಆಯೋಜಿಸಿರುವ ಬಹುದೊಡ್ಡ ಸ್ವದೇಶಿ ಮೇಳ, ದೇಶಿಯ ಉತ್ಪನ್ನ, ದೇಶಿಯ ಆಹಾರ, ದೇಶದ ಕಲೆ, ಸಂಸ್ಕೃತಿ ಹಾಗೂ ದೇಶಿಯ ಪರಂಪರೆಯನ್ನು ಗ್ರಾಹಕರ ಮನೆ ಮನ ತಲುಪುವ ನಿಟ್ಟಿನಲ್ಲಿ ಇಂತಹದೊಂದು ಬೃಹತ್ ಮೇಳವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಯತೀರ್ಥ ಕಟ್ಟಿ, ಸಂದೀಪ ಬೂದಿಹಾಳ, ರಚಿತಾ ಆಕಳವಾಡಿ, ಕೆ ಜಗದೀಶ್, ನರೇಂದ್ರ, ವಿಶ್ವನಾಥ್ ಪೆಟ್ಕರ್, ಸುಭಾಷ್ ಸಿಂಗ್ ಜಮಾದಾರ, ಬಸವರಾಜ ಕುಂದಗೊಳಮಠ, ವೆಂಕಟೇಶ್ ಬಿದರಹಳ್ಳಿ
ಹಾಗೂ ಇತರ ಕಾರ್ಯಕರ್ತರು ಮತ್ತು ಹಿತೈಷಿ ಬಂಧುಗಳು ಉಪಸ್ಥಿತರಿದ್ದರು.
Kshetra Samachara
05/02/2025 02:48 pm