", "articleSection": "News,Public News", "image": { "@type": "ImageObject", "url": "https://prod.cdn.publicnext.com/s3fs-public/378325-1738750073-4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಒಂದಲ್ಲಾ ಒಂದು ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವಂತ ಕೆಲಸ ಮಾಡ್ತಾ ಬಂದಿದ್ದಾರೆ. ಅದೇ ...Read more" } ", "keywords": ",Hubballi-Dharwad,News,Public-News", "url": "https://publicnext.com/node" }
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಒಂದಲ್ಲಾ ಒಂದು ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆಯುವಂತ ಕೆಲಸ ಮಾಡ್ತಾ ಬಂದಿದ್ದಾರೆ. ಅದೇ ರೀತಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿರುವ ಪ್ರತಿಯೊಂದು ಗುಟ್ಕಾ, ತಂಬಾಕು ಮಾರುವ ಅಂಗಡಿ ಮಾಲೀಕರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಲೇಬೇಕು, ಇಲ್ಲವಾದ್ರೆ ಅಂಗಡಿಗಳನ್ನೇ ತೆರವು ಮಾಡುತ್ತಾರೆ. ಅದಕ್ಕಾಗಿ ನಿನ್ನೆ ದಿನದಂದು ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ, ತಂಬಾಕು ಮಾರಾಟಗಾರರ ಜೊತೆ ಸಭೆ ಕೂಡ ಮಾಡಿದ್ದಾರೆ.
ಹೌದು,,,, ವಿಶ್ವ ಕ್ಯಾನ್ಸರ್ ದಿನದಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ, ಮತ್ತು ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ, ತಂಬಾಕು ಉತ್ಪಾದಕರು ಮತ್ತು ಮಾರಾಟಗಾರರನ್ನು ಸಭೆ ಮಾಡಿ ಕೆಲವೊಂದು ರೂಲ್ಸ್‌ಗಳನ್ನು ಹಾಕಿದ್ದಾರೆ. ಪ್ರತಿಯೊಬ್ಬ ಅಂಗಡಿಯವರು ಪಾಲಿಕೆಯಿಂದ ಲೈಸೆನ್ಸ್ ಪಡೆಯಲೇ ಬೇಕು. ಎಚ್ಚರ ಗ್ರಾಹಕರೇ ಎಚ್ಚರ..! ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಗುಟ್ಕಾ, ಸಿಗರೇಟ್ ತಂಬಾಕು ಮಾರುವಂತಿಲ್ಲ. ನಿಯಮ ಮೀರಿ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಸಿಗರೇಟ್, ಗುಟಕಾ ಮಾರಾಟ ಮಾಡುವಂತಿಲ್ಲ. ಬೇಕಾಬಿಟ್ಟಿಯಾಗಿ ಪ್ರದರ್ಶನ ಮಾಡಿದರೇ ಹುಷಾರ್..! ಪರವಾನಗಿ ಇಲ್ಲದೇ ಮಾರಾಟ ಮಾಡಿದರೇ ಬೀಳುತ್ತೆ ದಂಡ..! ಇಂತಹದೊಂದು ಅಭಿಯಾನ ಅವಳಿನಗರದಲ್ಲಿ ಆರಂಭಿಸಲು ಪಾಲಿಕೆ ಸದಸ್ಯರು, ಅಧಿಕಾರಿಗಳು ಮುಂದಾಗಿದ್ದಾರೆ. ಗುಟ್ಕಾ ತಂಬಾಕು ಮಾರುವವರಿಗೆ ಯಾವ ರೀತಿ ರೂಪುರೇಷೆಗಳು ಇರುತ್ತವೆ ಎಂಬುದನ್ನು ಮುಖ್ಯ ಆರೋಗ್ಯ ಅಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹೇಳುತ್ತಾರೆ ಕೇಳಿ.
ಇನ್ನು ಪಾಲಿಕೆಯು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ ಅಡಿಯಲ್ಲಿ, ಗುಟ್ಕಾ, ತಂಬಾಕು, ಸಿಗರೇಟ್ ಮಾರಾಟಗಾರರು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು. ಇಲ್ಲವಾದ್ರೆ ನಿಮ್ಮ ಅಂಗಡಿಯನ್ನು ತೆರವು ಮಾಡುತ್ತಾರೆ ಎಚ್ಚರ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
05/02/2025 03:37 pm