", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/462628-1738671085-hblrowdy.mp4_snapshot_00.00.317.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ನಗರದ ಟೌನ್ ಹಾಲ್ ಬಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸದ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದ ಹಾಗ ಸ್ಥಳ...Read more" } ", "keywords": "Parking Issue, Shop Robbery, Powder Roudis, Dacoity, Karnataka News, Indian News, Crime News, Robbery News, Shop News, Local News, Regional News, Social News, Karnataka Social News, Indian Social News, Crime Updates, Public Safety, Security Measures, Shop Security, Parking Problems, Traffic Congestion, Urban Issues, City Life, News Updates, Karnataka News Updates, Indian News Updates, Crime Prevention, Law and Order, Police News, Investigation News, Thief, Robber, Shopkeeper, Loss, ,Hubballi-Dharwad,Crime,Law-and-Order", "url": "https://publicnext.com/node" }
ಹುಬ್ಬಳ್ಳಿ : ನಗರದ ಟೌನ್ ಹಾಲ್ ಬಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸದ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದ ಹಾಗ ಸ್ಥಳಕ್ಕೆ ಹುಬ್ಬಳ್ಳಿ ಶಹರ ಠಾಣೆಯ ಇನ್ಸ್ಪೆಕ್ಟರ್ ತಹಶೀಲ್ದಾರ್ & ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಗಡಿ ಮುಂದೆ ಆಟೋ ನಿಲ್ಲಿಸಬೇಡಿ ಟ್ರಾಫಿಕ್ ಜಾಮ್ ಆಗತ್ತೆ ಅಂತಾ ಹೇಳಿದಕ್ಕೆ ಅಂಗಡಿಗೆ ನುಗ್ಗಿದ ಪುಡಿರೌಡಿಗಳು ಅಂಗಡಿ ಮಾಲೀಕ ಹಾಗೂ ಇಬ್ಬರ ಕೆಲಸಗಾರರ ಮೇಲೆ ಕಬ್ಬಿಣದ ಸ್ಪ್ಯಾನರ್ ಹಾಗೂ ಕೀ ಗಳಿಂದ ಹಲ್ಲೆ ನಡೆಸಿದ್ದ ಪರಿಣಾಮ ಮೂವರಿಗೆ ಗಾಯವಾಗಿದೆ. ಈ ಕುರಿತು ಅಂಗಡಿ ಮಾಲೀಕನ ಮಗಳು ಆರಾಧನಾ ಸರ್ ಈ ಪುಂಡರಿಂದ ನಮಗೆ ಭಯ ಆಗ್ತಿದೆ ನಮ್ಮಂತವರು ಹೇಗೆ ಬದುಕಬೇಕು ಎನ್ನೋದು ಗೊತ್ತಾಗ್ತಿಲ್ಲ ಭಯ ಸರ್ ಅಂತಾ ಮಾಧ್ಯಮದ ಮುಂದೆ ಹೇಳಿದ್ದು ಹೀಗೆ.
ಘಟನೆ ನಡೆಯುತ್ತಿದ್ದ ವೇಳೆಯಲ್ಲಿ ಅಂಗಡಿಯಲ್ಲಿದ್ದ ಮಹಿಳೆ ಸರ್ ಏಕಾಏಕಿ ಈ ಪುಂಡರು ಅಂಗಡಿಯೊಳಗೆ ನುಗ್ಗಿದ್ರು ಏನು ಮಾತನಾಡಲಿಲ್ಲ. ಸುಮ್ಮನೆ ನಮ್ಮ ಮಾಲಕ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ರು ಸರ್ ನಮಗೂ ಕೂಡ ಕೆಲಸ ಮಾಡೋಕೆ ಭಯ ಅನಿಸ್ತಿದೆ .ಅಂಗಡಿಯಲ್ಲಿನ ಗ್ಲಾಸ್ ಎಲ್ಲಾ ಒಡೆದಿದ್ದಾರೆ ಅಂತಾಳೇ ಅಂಗಡಿಯಲ್ಲಿ ಕೆಲಸ ಮಾಡುವ ಪದ್ಮಾ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಡಿಸಿಪಿ ನಂದಗಾವಿ ಸೂಚನೆ ಮೇರೆಗೆ ಶಹರ ಠಾಣೆಯ ಈ ಇನ್ಸ್ಪೆಕ್ಟರ್ ತಹಶೀಲ್ದಾರ್ ಹಲ್ಲೆಗೊಳಗಾದ ಮೂವರಿಂದ ದೂರನ್ನು ಪಡೆದಿದ್ದು,ಹಲ್ಲೆ ಮಾಡಿ ಪರಾರಿಯಾದ ಪುಡಿ ರೌಡಿಗಳ ಪತ್ತೆಗೆ ಮುಂದಾಗಿದ್ದಾರೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2025 05:42 pm