", "articleSection": "Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1738566385-kutumba.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ರಾಜ್ಯ ಅಷ್ಟೇ ಅಲ್ಲದೇ, ಇಡೀ ದೇಶವೇ ಮಮ್ಮಲ ಮರಗಿತ್ತು. ರಾಷ್ಟ್ರದ ಜನತೆ ಬೀದಿಗಿಳಿದ...Read more" } ", "keywords": "Hubballi, Neha Hiremath Murder Case, CBI Investigation, Karnataka Crime, Justice For Neha, Hubballi News, Murder Mystery, CBI Probe, Karnataka Police.,Hubballi-Dharwad,Crime,Law-and-Order,Government", "url": "https://publicnext.com/node" } ಹುಬ್ಬಳ್ಳಿ: 'ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು'

ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ರಾಜ್ಯ ಅಷ್ಟೇ ಅಲ್ಲದೇ, ಇಡೀ ದೇಶವೇ ಮಮ್ಮಲ ಮರಗಿತ್ತು. ರಾಷ್ಟ್ರದ ಜನತೆ ಬೀದಿಗಿಳಿದು ಹಂತಕನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿತ್ತು. ಆದ್ರೆ ಇಲ್ಲಿಯವರೆಗೂ ನೇಹಾ ಹಂತಕನಿಗೆ ಮಾತ್ರ ಯಾವುದೇ ಶಿಕ್ಷೆ ಆಗಿಲ್ಲ. ಈಗ ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಸಿಬಿಐಗೆ ತನಿಖೆ ಆಗಬೇಕು, ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕೆಂದು ನೇಹಾಳ ತಂದೆ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಾರೆ.

ಹೌದು, ಕಳೆದ ವರ್ಷ ಎಪ್ರಿಲ್ 18ರಂದು ಛೋಟಾ ಮುಂಬೈ ಬೆಚ್ಚಿ ಬಿದ್ದಿತ್ತು. ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವಿದ್ಯಾರ್ಥಿನಿ ನೇಹಾಳ ಕೊಲೆಯಾಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಫಯಾಜ್ ಎನ್ನುವ ಹಂತಕ ನೇಹಾಳನ್ನು ಹತ್ಯೆ ಮಾಡಿದ್ದ. ಕೊಲೆ‌ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಲೆಯಾದ ಕೆಲವೇ ಕ್ಷಣಗಳಲ್ಲಿ ಹಂತಕ ಫಯಾಜ್ ಪೊಲೀಸರ ಅತಿಥಿಯಾಗಿದ್ದ. ಆದ್ರೆ ವಿದ್ಯಾರ್ಥಿನಿ ನೇಹಾಳ‌ ಕೊಲೆ ಮಾತ್ರ ರಾಜ್ಯ ಸರ್ಕಾರಕ್ಕೆ ದೊಡ್ಡಮಟ್ಟದ ಇರಿಸುಮುರಿಸು ಮಾಡಿತ್ತು. ಇಡೀ ದೇಶವೇ ನೇಹಾಳ ಕೊಲೆ ಖಂಡಿಸಿ ಬೀದಿಗಿಳಿದು ಹೋರಾಟ ಮಾಡಿತ್ತು. ಅಲ್ಲದೇ ಕಾಂಗ್ರೆಸ್ ಮುಖಂಡ ಮತ್ತು ಪಾಲಿಕೆ ಸದಸ್ಯ ನೇಹಾಳ ತಂದೆ ನಿರಂಜನ ತಮ್ಮ ಸರ್ಕಾರದ ವಿರುದ್ಧವೇ ಮಾತಿನ ಯುದ್ಧ ನಡೆಸಿ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದರು. ಸರ್ಕಾರಕ್ಕೆ ಮುಜುಗರ ಉಂಟಾಗಿದ್ದರಿಂದ ನೇಹಾಳ ಕೊಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು. ಅಲ್ಲದೇ ಪಾಸ್ಟ್‌ಟ್ರ್ಯಾಕ್ ನಿರ್ಮಿಸಿ 120 ದಿನಗಳಲ್ಲಿಯೇ ನೇಹಾಳ ಸಾವಿಗೆ ನ್ಯಾಯ ದೊರಕಿಸಿಕೊಡುವ ಬರವಸೆ ನೀಡಿತ್ತು. ಆದ್ರೆ ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ ಮತ್ತು ಪಾಸ್ಟ್‌ಟ್ರ್ಯಾಕ್ ಕೋರ್ಟ್ ನಿರ್ಮಾಣ ಆಗಿಲ್ಲ. ಈಗಾಗಿ ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಮೊನ್ನೆಯಷ್ಟೇ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದರು. ಶ್ರೀರಾಮಸೇನೆ ಬೆನ್ನಲ್ಲೇ ನೇಹಾ ತಂದೆಯಿಂದಲೂ ಸಿಬಿಐ ತನಿಖೆಗೆ ಆಗ್ರಹ ಕೇಳಿ ಬಂದಿದೆ. ನೇಹಾ ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು, ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ 120 ದಿನಗಳಲ್ಲಿ ನೇಹಾ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿತ್ತು. ಆದ್ರೆ ಒಂಬತ್ತು ತಿಂಗಳು ಕಳೆದರೂ ನನ್ನ ಮಗಳ‌ ಸಾವಿಗೆ ನ್ಯಾಯ ಸಿಗುವ ಭರವಸೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಹಾಗೂ ಸಿಐಡಿಯಿಂದ ನ್ಯಾಯ ಸಿಗುವ ಭರವಸೆ ಕ್ಷೀಣಿಸುತ್ತಿದೆ. ಈ‌ ಕಾರಣದಿಂದಾಗಿಯೇ ಈ‌ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಸಿಬಿಐಗೆ ವಹಿಸಿದರೆ ಮಾತ್ರ ನನ್ನ ಮಗಳ‌ ಸಾವಿಗೆ ನ್ಯಾಯ ಸಿಗುವ ಭರವಸೆ ಸಿಗಲಿದೆ. ರಾಜ್ಯ ಸರ್ಕಾರ ನನ್ನ ಮಗಳ‌ ಸಾವಿಗೆ ನ್ಯಾಯ ಕೊಡಿಸಬೇಕು. ಈ‌ ಪ್ರಕರಣವನ್ನ ಸಿಬಿಐಗೆ ವಹಿಸಲೇಬೇಕು ಎಂದು ನೇಹಾ ತಂದೆ ಆಗ್ರಹಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2025 12:36 pm

Cinque Terre

81.38 K

Cinque Terre

23

ಸಂಬಂಧಿತ ಸುದ್ದಿ