", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1738659722-varrr.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ : 21 ತಿಂಗಳುಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಖಾಲಿಯಾಗಿದ್ದ ಕುಂದಗೋಳ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ಯಾಮಸುಂದರ್ ದೇಸಾಯಿ...Read more" } ", "keywords": "Kundagol, Sham Sunder, Manjunath, Unopposed Election, Karnataka News, Local Body Elections, Panchayat Elections, Rural Development, Indian Politics, Grassroot Leadership, Kundagol Panchayat.,Hubballi-Dharwad,Politics", "url": "https://publicnext.com/node" }
ಕುಂದಗೋಳ : 21 ತಿಂಗಳುಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಖಾಲಿಯಾಗಿದ್ದ ಕುಂದಗೋಳ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಶ್ಯಾಮಸುಂದರ್ ದೇಸಾಯಿ ಉಪಾಧ್ಯಕ್ಷರಾಗಿ ಮಂಜುನಾಥ ಹಿರೇಮಠ ಆಯ್ಕೆ ಆಗಿದ್ದಾರೆ.
ಹೌದು ! ಕುಂದಗೋಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದನ್ನು ಪ್ರಶ್ನೆ ಮಾಡಿ ತಡೆಯಾಜ್ನೆ ತಂದ ಹಿನ್ನೆಲೆಯಲ್ಲಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಮೇ.06 ರಿಂದ 2023 ರಿಂದ ಬರೋಬ್ಬರಿ 21 ತಿಂಗಳು ಕಾಲ ಖಾಲಿಯಾಗಿದ್ದವು.
ಇದೀಗ ನಿರ್ದಿಷ್ಟ ಪಡಿಸಿದ ಹಳೆಯ ಮೀಸಲಾತಿಯಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ.3 ರಂದು ಆಯ್ಕೆ ನಡೆದಿದ್ದು 12 ಸದಸ್ಯರ ಬಲ ಹೊಂದಿರುವ ಬಿಜೆಪಿಯ ಶ್ಯಾಮಸುಂದರ ದೇಸಾಯಿ ಅಧ್ಯಕ್ಷರಾಗಿ, ಮಂಜುನಾಥ ಹಿರೇಮಠ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ರಾಜು ಮಾವರಕರ ಚುನಾವಣೆ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳ ಅವಿರೋಧ ಆಯ್ಕೆ ತಿಳಿಸಿದರು. ಶಾಸಕ ಎಂ.ಆರ್.ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಸಂಭ್ರಮ ಆಚರಣೆ ಮಾಡಿದರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
04/02/2025 02:32 pm