", "articleSection": "Politics,Human Stories,Government", "image": { "@type": "ImageObject", "url": "https://prod.cdn.publicnext.com/s3fs-public/378325-1738577548-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡ ತಾಲೂಕಿನ ಮುಗದ ಗ್ರಾಮ ಪಂಚಾಯ್ತಿ ಧಾರವಾಡ ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲಿ ಒಂದು. ಸದ್ಯ ಈ ಪಂಚಾಯ್ತಿಗೆ ರವಿ ಚಂದ...Read more" } ", "keywords": "Dharwad, Fake Caste Certificate, President Post, Karnataka News, Congress Party, Haveri District, Caste Controversy, Election Issues, Indian Politics,Hubballi-Dharwad,Politics,Human-Stories,Government", "url": "https://publicnext.com/node" } ಧಾರವಾಡ: ಅಧ್ಯಕ್ಷ ಸ್ಥಾನಕ್ಕಾಗಿ ನಕಲಿ ಜಾತಿ ಪ್ರಮಾಣಪತ್ರ ಬಳಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಧ್ಯಕ್ಷ ಸ್ಥಾನಕ್ಕಾಗಿ ನಕಲಿ ಜಾತಿ ಪ್ರಮಾಣಪತ್ರ ಬಳಕೆ

ಧಾರವಾಡ: ಧಾರವಾಡ ತಾಲೂಕಿನ ಮುಗದ ಗ್ರಾಮ ಪಂಚಾಯ್ತಿ ಧಾರವಾಡ ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯ್ತಿಗಳಲ್ಲಿ ಒಂದು. ಸದ್ಯ ಈ ಪಂಚಾಯ್ತಿಗೆ ರವಿ ಚಂದ್ರಪ್ಪ ಕಸಮಳಗಿ ಅಧ್ಯಕ್ಷರಾಗಿದ್ದಾರೆ. ಆದರೆ, ಇವರು ಅಧ್ಯಕ್ಷ ಸ್ಥಾನ ಪಡೆಯುವುದಕ್ಕಾಗಿ ನೀಡಿದ್ದ ಜಾತಿ ಪ್ರಮಾಣ ಪತ್ರವೇ ಈಗ ರದ್ದಾಗಿದೆ.

ಹೌದು! ಈ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿತ್ತು. ಇದೇ ಜಾತಿ ಪ್ರಮಾಣ ಪತ್ರ ಪಡೆದು ರವಿ ಅವರು 2023ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, 2019ರಲ್ಲಿ ನಡೆದ ಪಂಚಾಯ್ತಿ ಚುನಾವಣೆಯಲ್ಲಿ ಇದೇ ರವಿಯವರು, ಪ್ರವರ್ಗ 3ಬಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಹೀಗಾಗಿ ಇವರ ಆಯ್ಕೆ ಕಾನೂನು ಬಾಹಿರ ಎಂದು ಗ್ರಾಮ ಪಂಚಾಯ್ತಿ ಕೆಲ ಸದಸ್ಯರು ಹೋರಾಟ ಆರಂಭಿಸಿದ್ದರು. ಇದೀಗ ಉಪವಿಭಾಗಾಧಿಕಾರಿಗಳ ವಿಚಾರಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಳಿಸಿದ್ದ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ಆದೇಶಿಲಾಗಿದೆ. ಆದರೂ, ರವಿ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಇಳಿದಿಲ್ಲ.

ಆರಂಭದಲ್ಲಿ ಗ್ರೇಡ್ 2 ತಹಶೀಲ್ದಾರ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಮಾಡಲಾಗಿತ್ತು. ಇಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಿನ್ನಡೆ ಅನುಭವಿಸಿದ್ದಲ್ಲದೇ ಅಧ್ಯಕ್ಷರ ಪರವಾಗಿಯೇ ಆದೇಶ ಹೊರ ಬಿದ್ದಿತ್ತು. ಆದರೆ ಈ ಆದೇಶ ಪ್ರಶ್ನಿಸಿ ಧಾರವಾಡ ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ದಾಖಲೆ ಪರಿಶೀಲಿಸಿದಾಗ ಜಾತಿ ಪ್ರಮಾಣ ನೀಡುವಲ್ಲಿ ಆಗಿರುವ ತಪ್ಪು ಬೆಳಕಿಗೆ ಬಂದಿದೆ. ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಷ್ಟೇ ಅಲ್ಲದೇ ಗ್ರೇಡ್ 2, ಕಂದಾಯ ನಿರೀಕ್ಷಕರು ಹಾಗೂ ಮುಗದ ಗ್ರಾಮ ಲೆಕ್ಕಾಧಿಕಾರಿ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಈ ಪ್ರಕರಣದ ವಾದ ಮತ್ತು ಪ್ರತಿವಾದ ಆಲಿಸಿದ್ದಲ್ಲದೇ ದಾಖಲೆ ಪರಿಶೀಲಿಸಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು, ಧಾರವಾಡ ತಹಶೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರ ನೀಡಿದ್ದ ‘ಅ’ ವರ್ಗದ ಜಾತಿ ಪ್ರಮಾಣಪತ್ರವನ್ನೇ ರದ್ದುಗೊಳಿಸಿ, ಆದೇಶಿಸಿದೆ. 2024ರ ನವೆಂಬರ್‌ 19ರಂದೇ ಉಪವಿಭಾಗಾಧಿಕಾರಿ ಆದೇಶ ಆಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಬಳಸಲಾಗಿದ್ದ ಜಾತಿ ಪ್ರಮಾಣ ಪತ್ರವೇ ರದ್ದಾಗಿದ್ದರೂ ಅಧ್ಯಕ್ಷ ರವಿ ಅಧಿಕಾರ ಬಿಟ್ಟು ಇಳಿದಿಲ್ಲ.‌ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಆಗಲಿ, ಜಿಲ್ಲಾಡಳಿತವೂ ಕ್ರಮ‌ಕೈಗೊಂಡಿಲ್ಲ. ಹೀಗಾಗಿ ಹೋರಾಟ ಮಾಡುತ್ತಿರುವ ಸದಸ್ಯರು ಈಗ ಕಾನೂನು ಹೋರಾಟಕ್ಕೆ ‌ಮುಂದಾಗಿದ್ದಾರೆ.

Edited By : Somashekar
Kshetra Samachara

Kshetra Samachara

03/02/2025 03:42 pm

Cinque Terre

14.04 K

Cinque Terre

0

ಸಂಬಂಧಿತ ಸುದ್ದಿ