", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738664979-V4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಕತ್ತಲು ಕವಿದಿದ್ದ ಗೋಕುಲ ಬಸ್ ನಿಲ್ದಾಣದಲ್ಲಿ ಬೆಳಕು ಚೆಲ್ಲಿದೆ. ಅನೈರ್ಮಲ್ಯ ಮಾಯವಾಗಿ ಸ್ವಚ್ಛತ...Read more" } ", "keywords": ",Hubballi-Dharwad,Infrastructure,Government,News,Public-News", "url": "https://publicnext.com/node" }
ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಕತ್ತಲು ಕವಿದಿದ್ದ ಗೋಕುಲ ಬಸ್ ನಿಲ್ದಾಣದಲ್ಲಿ ಬೆಳಕು ಚೆಲ್ಲಿದೆ. ಅನೈರ್ಮಲ್ಯ ಮಾಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬಾಗಿಲು ಹಾಕಿದ್ದ ಮಹಿಳಾ ವಿಶ್ರಾಂತಿ ಗೃಹ ಪುನಃ ಬಾಗಿಲು ತೆರೆದಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ ರಸ್ತೆ ಹೊಸ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಇತ್ತೀಚೆಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ಸಾರಿಗೆ ಅಧಿಕಾರಿಗಳ ಗಮನ ಸೆಳೆದಿತ್ತು. ಬಸ್ ನಿಲ್ದಾಣದಲ್ಲಿನ ಮೂಲ ಸೌಕರ್ಯಗಳಾದ ಆಸನಗಳು, ಬಂದ್ ಆಗಿರುವ ಹೈಮಾಸ್ಟ್ ದೀಪ, ಮಹಿಳೆಯರಿಗೆ ರಾತ್ರಿ ವಿಶ್ರಾಂತಿಗೆ ಸಿಗದ ವಿಶ್ರಾಂತಿ ಗೃಹದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ಇದನ್ನು ಗಮನಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಮೂಲ ಸೌಕರ್ಯಗಳ ಸಮಸ್ಯೆಯನ್ನು ಸರಿದೂಗಿಸುವ ಕೆಲಸ ಮಾಡಿದ್ದಾರೆ.
ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಸಂಚಾರ ಮಾಡುವ ಪ್ರಾಮಾಣಿಕರ ಅನುಕೂಲಕ್ಕೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಅಧಿಕಾರಿಗಳು ಮೂಲ ಸೌಕರ್ಯಗಳನ್ನು ಒದಗಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2025 03:59 pm