ಹುಬ್ಬಳ್ಳಿ: ಬಿಜೆಪಿ ಒಳಗೊಳಗೆ ಪ್ರಧಾನಿ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ನರೇಂದ್ರ ಮೋದಿ ವಿರುದ್ಧ ಮಾತನಾಡೋಕೆ ಯಾರಿಗೂ ಧೈರ್ಯ ಇಲ್ಲ. ಮಾಜಿ ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್‌ಗೆ ಬಂದರೆ ವೈಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಗ್ಯಾರಂಟಿಯಿಂದ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಅಂತ ಕೆಲ ಶಾಸಕ ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಬರುವ ಅನುದಾನ ಬರುತ್ತಿದೆ. ಹೆಚ್ಚಿನ ಅನುದಾನ ಕೊಟ್ಟಿಲ್ಲ ಅಷ್ಟೇ. ಬಿ.ಆರ್.ಪಾಟೀಲ್ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅವರನ್ನೇ ಕೇಳಿ. ಸೂರ್ಯ ಚಂದ್ರ ಇರುವವರಿಗೆ ಅನುದಾನ ಕೊರತೆ ಇರುತ್ತದೆ. ಬೆಡ್ತಿ ನಾಲೆ, ಹುಲಿ ಕೋಟಿ ಸೇರಿ ಹಲವು ಕಾಮಗಾರಿಗೆ ಅನುದಾನ ಕೊಟ್ಟಿದ್ದೇವೆ ಎಂದರು.
ರಾಜ್ಯ ಬಜೆಟ್ ವಿಚಾರಕ್ಕೆ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಜೆಟ್ ಮಾಡ್ತಾ ಇದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆಯುತ್ತಿದ್ದಾರೆ. ಎಲ್ಲಾ ಸಚಿವರಿಗೂ ಅವಕಾಶ ಕೊಡ್ತಾ ಇದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2025 12:40 pm