ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೆಹಲಿ ಚುನಾವಣೆ ಬಗ್ಗೆ ಸಚಿವ ಲಾಡ್ ಭರವಸೆ, ಆರ್ಥಿಕ ದಿವಾಳಿತನಕ್ಕೆ ಕೇಂದ್ರ ಸರ್ಕಾರ ಕಾರಣ..!

ಹುಬ್ಬಳ್ಳಿ: ದೆಹಲಿ ಚುನಾವಣೆ ವಿಚಾರದಲ್ಲಿ ಸತ್ಯ ಹೇಳಬೇಕಾಗುತ್ತೆ. ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಗೆಲ್ಲುತ್ತದೆ. ಆಪ್ ಪಕ್ಷ ಮೊದಲು, ಸೆಕೆಂಡ್ ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನು ಇನ್ನೂ ದೇಶದ ಜನ ಅರ್ಥ ಮಾಡ್ಕೊಂಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಫಿಲೋಸಫಿ ಜನರಿಗೆ ಮುಟ್ಟುವ ಕೆಲಸ ನಾವು ಮಾಡ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಬಹಳ ಚನ್ನಾಗಿ ಮಾತಾಡಿದ್ದಾರೆ. ಆದ್ರೆ ಅದನ್ನು ತೋರಿಸಲ್ಲ, ಅದರ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ಬಿಜೆಪಿ ಅವರ ದೇಶದಲ್ಲಿ ಎಐ ಯಾವ ಲೆವೆಲ್ ನಲ್ಲಿದ್ದೇವೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗಲ್ಲ, 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡಿದೆ. ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸಿತ ಇದೆ ಎಂದರು.

ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು.70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು 10 ವರ್ಷದಲ್ಲಿ ಆಗಿದೆ. ಪ್ರಧಾನ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲ್ಲರಿಗಿಂತ ದೊಡ್ಡ ಸಾಧನೆ ಆಲ್ವಾ ಇದು..? ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಥೈಲ್ಯಾಂಡ್ ಗೆ ವೀಸಾ ಫ್ರಿ ಅಂದ್ರೆ ಪವರ್ ಫುಲ್ ಏನ್ರಿ?

ಪವರ ಫುಲ್ ಇದ್ರೆ ಡಾಲರ್ ಯಾಕೆ ಬೀಳ್ತಾ ಇದೆ, ಕೇಳಿ ಅವರನ್ನು ಬಿಜೆಪಿ ಹಾಗೂ ಮೋದಿ ಅವರ ಪಬ್ಲಿಸಿಟಿ ತಗೊಂಡು ದೇಶ ಹಾಳು ಆಗ್ತಿದೆ. ನಮ್ಮ ದೇಶದ ಸಾಲಕ್ಕಿಂತ 20% ಬಡ್ಡಿ ಕಟ್ಟುತ್ತಾ ಇದ್ದೇವೆ. ಬೆಳಗ್ಗೆ ಎದ್ದರೇ ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡ್ತಾರೆ. ನಾವು ತಲೆ ಕೂದಲು ಎಷ್ಟಿವೆ ಅಷ್ಟು ದೇವಸ್ಥಾನಗಳನ್ನ ಕಟ್ಟಿದ್ದೇವೆ ಎಂದು ಅವರು ಹೇಳಿದರು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/02/2025 12:57 pm

Cinque Terre

16.18 K

Cinque Terre

5

ಸಂಬಂಧಿತ ಸುದ್ದಿ