ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೇಕೆ ಬೇಕು ಮೂಲಭೂತ ಸೌಕರ್ಯಗಳು - ಇದು ವಾರ್ಡ್ ನಂ 61ನೇ ಕನ್ಯಾ ನಗರದ ನಿವಾಸಿಗಳ ಕೂಗು

ಹುಬ್ಬಳ್ಳಿ: ನಿಮ್ಮ ಪಬ್ಲಿಕ್ ನೆಕ್ಸ್ಟ್ 'ನಮ್ಮ ಊರು ನಮ್ಮ ಕೆರೆ ನಮ್ಮ ವಾರ್ಡ್' ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನರ ಸಮಸ್ಯೆಗಳನ್ನು ಆಲಿಸಿ ಪ್ರತ್ಯಕ್ಷ ವರದಿಗಳನ್ನು ಮಾಡುತ್ತಾ ಇದೆ. ಅದೇ ರೀತಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 61ರಲ್ಲಿ ಬರುವ ಕನ್ಯಾ ನಗರದ ಜನರು ಮೂಲ ಸೌಕರ್ಯಗಳು ಸಿಗದೆ ನಿತ್ಯವೂ ಪರದಾಡುತ್ತಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಇನ್ನೂವರೆಗೂ ಯಾವ ಅಧಿಕಾರಿಗಳು, ಜನ ನಾಯಕರು ಕಾರ್ಪೊರೇಟರ್ ಇತ್ತ ತಿರುಗಿ ನೋಡುತ್ತಿಲ್ಲ. ಅದಕ್ಕಾಗಿ ಇಡೀ ಕನ್ಯಾ ನಗರದ ನಿವಾಸಿಗಳು ರಸ್ತೆಗಿಳಿದು ಬೇಕೆ ಬೇಕು ಮೂಲಭೂತ ಸೌಕರ್ಯಗಳು ಬೇಕು ಎಂದು ಹೋರಾಟ ನಡೆಸಿದ್ದಾರೆ.

ವಿಜುಲ್ಸ್ ಪ್ಲೋ....

ಹೌದು,,, ಈ ಕನ್ಯಾ ನಗರದಲ್ಲಿ ಸುಮಾರು ವರ್ಷಗಳಿಂದ ಅದೆಷ್ಟೋ ಜನರು ವಾಸಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಂಡಿಲ್ಲ. ಸೂಕ್ತ ಶೌಚಾಲಯ ಇಲ್ಲ, ಒಳ ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರ ವ್ಯವಸ್ಥೆ ಇಲ್ಲ, ರಸ್ತೆ ಇಲ್ಲ, ಹಕ್ಕುಪತ್ರವಿಲ್ಲ. ಹೀಗಿದ್ದರೂ ಪಾಲಿಕೆ ಮಾತ್ರ ಜನರಿಂದ ಟ್ಯಾಕ್ಸ್ ತುಂಬಿಸಿಗೊಳ್ಳುತ್ತಲೇ ಇದೆ. ಈ ಭಾಗದ ಕಾರ್ಪೊರೇಟರ್ ದೊರರಾಜ ಮಣಿಕುಂಟ್ಲ ಇತ್ತ ಕಣ್ಣೆತ್ತಿ ಕೂಡ ನೋಡುತ್ತಿಲ್ಲವಂತೆ. ಐದು ವರ್ಷಕ್ಕೊಮ್ಮೆ ವೋಟ್ ಕೇಳಲು ಬರುತ್ತಾರೆ, ಕೈ ಮುಗಿತಾರೆ ಹೋಗ್ತಾರೆ. ಗೆದ್ದ ನಂತರ ಅವರನ್ನು ನಾವೇ ಹುಡಿಕಿಕೊಂಡು ಹೋದ್ರು ಸಿಗುವುದಿಲ್ಲ. ಅದಕ್ಕಾಗಿ ರಸ್ತೆಗಿಳಿದು ಹೋರಾಟ ನಡೆಸಿದ್ದೇವೆ ಎಂದು ಕನ್ಯಾ ನಗರದ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.

ಈ ಜನ ನಾಯಕರಿಗೆ ಇವರ ವೋಟ್ ಮಾತ್ರ ಬೇಕು ಅವರ ಸಮಸ್ಯೆಗಳು ಬೇಕಾಗಿಲ್ಲ. ಮೂಲಭೂತ ಸೌಕರ್ಯಗಳಿಗಾಗಿ ಜನರು ಹೀಗೆ ಹೋರಾಟ ಮಾಡುವಂತ ಪರಿಸ್ಥಿತಿ ಎದುರಾಗಿದೆ. ಈಗಲಾದ್ರು ಪಾಲಿಕೆ ಅಧಿಕಾರಿಗಳೇ, ಮತ ಪಡೆದ ನಾಯಕರೇ ಪಾಪ ಈ ಜನರ ಸಮಸ್ಯೆಗಳನ್ನು ಬಗೆ ಹರಿಸಿ ನೆಮ್ಮದಿ ಜೀವನ ನಡೆಸಲು ಅವಕಾಶ ಮಾಡಿಕೊಡಿ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2025 02:16 pm

Cinque Terre

39.04 K

Cinque Terre

1

ಸಂಬಂಧಿತ ಸುದ್ದಿ