", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/462628-1738666270-hbllllll.mp4_snapshot_00.00.000.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅಂಗಡಿ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾ ತೆಗಿ ಎಂದಿದ್ದಕ್ಕೆ ಐದಾರು ಪುಡಿ ರೌಡಿಗಳು ಅಂಗಡಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡ...Read more" } ", "keywords": "Hubballi, Robbery, Shop Robbery, Powder Roudis, Dacoity, Karnataka News, Indian News, Hubballi News, Crime News, Robbery News, Shop News, Local News, Regional News, Social News, Karnataka Social News, Indian Social News, Crime Updates, Hubballi Crime, Police News, Investigation News, Thief, Robber, Shopkeeper, Loss, Hubballi Police, Karnataka Police, Indian Police, Crime Prevention, Hubballi Safety, Public Safety,,Hubballi-Dharwad,Crime,Law-and-Order", "url": "https://publicnext.com/node" }
ಹುಬ್ಬಳ್ಳಿ: ಅಂಗಡಿ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾ ತೆಗಿ ಎಂದಿದ್ದಕ್ಕೆ ಐದಾರು ಪುಡಿ ರೌಡಿಗಳು ಅಂಗಡಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅಂಗಡಿಯಲ್ಲಿದ್ದ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಘಟನೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಟೌನ್ ಹಾಲ್ ಬಳಿ ನಡೆದಿದೆ.
ಹುಬ್ಬಳ್ಳಿಯ ಟೌನ್ ಹಾಲ್ ಎದುರುಗಡೆ ಇರುವ ಶ್ರುತಿ ಶೀಟ್ ಕವರ್ ಅಂಗಡಿ ಮುಂದೆ ರಿಕ್ಷಾ ಚಾಲಕನೊಬ್ಬ ರಿಕ್ಷಾ ನಿಲ್ಲಿಸಿದ್ದಾನೆ. ಆಗ ಅಂಗಡಿಯವರು ರಿಕ್ಷಾ ತೆಗೆಯಿರಿ. ಇಲ್ಲಿ ವಾಹನಗಳಿಗೆ ಸೀಟ್ ಹಾಕೋದು ಇದೆ ಅಂತಾ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಕೆಲವು ಪುಂಡರನ್ನು ಕರೆದುಕೊಂಡು ಬಂದು ಅಂಗಡಿಯೊಳಗೆ ನುಗ್ಗಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಘಟನೆಯಲ್ಲಿ ಅಭಿ ಗಾಮನಗಟ್ಟಿ, ಸುಮಂತ, ಹಾಗೂ ಡೇವಿಡ್ ಎಂಬುವರಿಗೆ ಗಾಯವಾಗಿದೆ. ಅಂಗಡಿ ಮುಂದಿನ ಆಟೋ ತೆಗಿ ಅಂದಿದಕ್ಕೆ ಈ ಪುಡಿ ರೌಡಿಗಳು ಅಂಗಡಿ ಒಳಗೆ ನುಗ್ಗಿ ಮನಸ್ಸೋ ಇಚ್ಛೆ ಹಲ್ಲೆ ಮಾಡ್ತಾರೆ ಅಂದ್ರೆ ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಸದ್ಯ ಗಾಯಗೊಂಡ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಈ ಪುಂಡರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2025 04:21 pm