", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1738641379-ddd.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಹುಬ್ಬಳ್ಳಿಯ ರಿಂಗ್ ರೋಡ್‌ನಲ್ಲಿ ದರೋಡೆ, ನವನಗರ ಎಪಿಎಂಸಿಯಲ್ಲಿ ಅ...Read more" } ", "keywords": "Hubballi, Bellambi Police Firing, Interstate Robbers, Police Encounter, Crime News, Karnataka Police, Gunfire, Robbery Gang, Law and Order, Police Action, Criminal Arrest.,Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು - ಅಂತರರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು - ಅಂತರರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಹುಬ್ಬಳ್ಳಿಯ ರಿಂಗ್ ರೋಡ್‌ನಲ್ಲಿ ದರೋಡೆ, ನವನಗರ ಎಪಿಎಂಸಿಯಲ್ಲಿ ಅಂಗಡಿ ಹಾಗೂ ಗಬ್ಬೂರಿನಲ್ಲಿನ ಜೈನ ಮಂದಿರದಲ್ಲಿ ಕಳ್ಳತನ ಮಾಡಿದ್ದ ನಟೋರಿಯಸ್ ಅಂತರರಾಜ್ಯ ದರೋಡೆಕೋರರ ಮೇಲೆ ಖಾಕಿ ಪೈರಿಂಗ್ ಮಾಡಿ ಇಬ್ಬರನ್ನು ಬಂಧಿಸಿದೆ.

ನಿನ್ನೆ ರಾತ್ರಿ ರಿಂಗ್ ರೋಡ್‌ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಸವಾರರನ್ನು ದರೋಡೆ ಮಾಡಿದ ಮಾಹಿತಿ ತಿಳಿಯುತ್ತಿದ್ದ ಹಾಗೆ ಅಲರ್ಟ್ ಆದ ಪೊಲೀಸರು ವಿವಿಧ ಪ್ರದೇಶಗಳಲ್ಲಿ ನಾಕಾ ಬಂದಿಹಾಕಿ ಪರಿಶೀಲನೆ ಆರಂಭಿಸಿತ್ತು. ಈ ವೇಳೆ ಐದಾರು ಜನರಿದ್ದ ದರೋಡೆಕೋರರು ವಾಹನ ನಿಲ್ಲಿಸದೇ ಬ್ಯಾರಿಕೇಡ್ ಜಖಂಗೊಳಿಸಿ ಎಸ್ಕೇಪ್ ಆಗಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್ ಎಸ್ ಆರ್ ನಾಯಕ ಅವರಿಗೆ ದರೋಡೆಕೋರರು ರಿಂಗ್ ರೋಡ್ ಬಳಿಯ ಕಡಪಟ್ಟಿ ಹಳಿಯಾಳ ರಸ್ತೆಯ ಬಳಿ ಇರುವ ಮಾಹಿತಿ ಲಭ್ಯವಾಗಿತ್ತು. ಬಂಧನ ಮಾಡಲು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಆರಂಭಿಸಿದರು. ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ದರೋಡೆಕೋರರ ಮೇಲೆ ಪೈರಿಂಗ್ ಮಾಡಿದಾಗ ಇಬ್ಬರ ಕಾಲಿಗೆ ಗುಂಡೇಟು ಬಿದ್ದಿದೆ.

ಸದ್ಯ ಈ ಆರೋಪಿಗಳು ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿದ ಮಾಹಿತಿ ಇದ್ದು ಇದು ನಟೋರಿಯಸ್ ಚಾದರ್ ಹಾಗೂ ಚಡ್ಡಿ ಗ್ಯಾಂಗ್ ಅಂತ ಸದ್ಯಕ್ಕೆ ತಿಳಿದು ಬಂದಿದೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2025 09:26 am

Cinque Terre

159.38 K

Cinque Terre

12

ಸಂಬಂಧಿತ ಸುದ್ದಿ