", "articleSection": "Politics,Crime", "image": { "@type": "ImageObject", "url": "https://prod.cdn.publicnext.com/s3fs-public/462628-1738488012-WhatsApp-Image-2025-02-02-at-2.40.38-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಮೈಕ್ರೊ ಪೈನಾನ್ಸ್,‌ ಬಡ್ಡಿ ದಂಧೆಕೋರರ ಹಾವಳಿ ತಡೆಯಬೇಕಾಗಿದೆ. ಬಡವರನ್ನ, ಜನಸಾಮಾನ್ಯರನ್ನ ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದ...Read more" } ", "keywords": "I tried to find what you're looking for, but couldn't quite get it. You might want to try searching online for more info on micro finance and related topics,Hubballi-Dharwad,Politics,Crime", "url": "https://publicnext.com/node" } ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್, ಬಡ್ಡಿಕೋರರ ಹಾವಳಿಗೆ ಸುಗ್ರೀವಾಜ್ಞೆ ತಯಾರಾಗಿದೆ : ಎಚ್.ಕೆ ಪಾಟೀಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್, ಬಡ್ಡಿಕೋರರ ಹಾವಳಿಗೆ ಸುಗ್ರೀವಾಜ್ಞೆ ತಯಾರಾಗಿದೆ : ಎಚ್.ಕೆ ಪಾಟೀಲ್

ಹುಬ್ಬಳ್ಳಿ: ಮೈಕ್ರೊ ಪೈನಾನ್ಸ್,‌ ಬಡ್ಡಿ ದಂಧೆಕೋರರ ಹಾವಳಿ ತಡೆಯಬೇಕಾಗಿದೆ. ಬಡವರನ್ನ, ಜನಸಾಮಾನ್ಯರನ್ನ ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದಂತೆ ಥಳಿಸಿ ವಸೂಲಿ ಮಾಡಲಾಗುತ್ತಿದೆ. ಮೈಕ್ರೋ ಪೈನಾನ್ಸ್,‌ ಬಡ್ಡಿ ದಂಧೆಕೋರರಿಗೆ ಲಗಾಮು ಹಾಕಬೇಕಾಗಿದೆ. ಇದಕ್ಕಾಗಿ ಸುಗ್ರಿವಾಜ್ಞೆ ತಯಾರಾಗಿದೆ ಎಂದು ಹುಬ್ಬಳ್ಳಿಯಲ್ಲಿ ‌ಕಾನೂನು ಸಚಿವ ಎಚ್ ಕೆ ಪಾಟೀಲ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದಕ್ಕೆ ಓಂಬುಡ್ಸ್ ಮನ್ ನೇಮಕ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾವುದು. ಜನರ ಭಾವನೆ ಹಾಗೂ ಬದುಕಿನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆ ನಾವು ಒಪ್ಪಲ್ಲ. ಈ ಮಸೂದೆ ಜಾರಿಗೆ ಎಲ್ಲ ಬಗೆಯ ಸಿದ್ಧತೆ ಆಗಿದೆ.

ಮುಖ್ಯಮಂತ್ರಿಗಳಿಗೆ ಸಹ ಈಗಾಗಲೇ ಕಳುಹಿಸಿ ಕೊಡಲಾಗಿದೆ. ಸುಗ್ರೀವಾಜ್ಞೆಯ ಪರಿಶೀಲನೆ ಸಿಎಂ ಮಾಡಬೇಕಾಗುತ್ತದೆ.

ಇದರ ಪರಮಾಧಿಕಾರವನ್ನ ನಾವು ಸಿಎಂಗೆ ಕೊಟ್ಟಿದ್ದೇವೆ. ರಾಜ್ಯಪಾಲರಿಗೆ ಕಳುಹಿಸುವ ಮುನ್ನ ಸಿಎಂ ಅವರು ಪರಿಶೀಲನೆ ಮಾಡಬೇಕಾಗುತ್ತದೆ. ಸಚಿವ ಸಂಪುಟದಲ್ಲಿ ಪಾಸ್ ಮಾಡಲು ಸಿಎಂ ಅವರಿಗೆ ಅಧಿಕಾರ ನೀಡಲಾಗಿದೆ. ಈ ಮಸೂದೆಯನ್ನ ಸಿಎಂ ನೋಡಿ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತಾರೆ. ಮೈಕ್ರೋಪೈನಾನ್ಸ್ ಕಂಪನಿ ಸಿಬ್ಬಂದಿ ,ಬಡ್ಡಿ ದಂಧೆಕೋರರ ದೌರ್ಜನ್ಯ ಸಹಿಸಲಾಗದು, ಇಂತಹ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿ ಮಾಡಲಾಗುತ್ತಿದೆ ಎಂದರು.

ದೌರ್ಜನ್ಯಕ್ಕೆ ಒಳಗಾಗುವವರ ವಿರುದ್ಧ ರಕ್ಷಣೆ ನೀಡಲಾಗುವುದು. ಆರ್ ಬಿ ಐ ಮಾರ್ಗದರ್ಶಿ ಪಾಲನೆ ಮಾಡಬೇಕು. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಆರ್ ಬಿಐ ಇದೆ. ಯಾವುದೇ ನಿಯಮ ಪಾಲನೆ ಆಗತಾ ಇಲ್ಲ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2025 02:57 pm

Cinque Terre

100.54 K

Cinque Terre

0