", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1738488097-vanchak.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನೌಕರಿ ಮತ್ತು ಖಾಲಿ ನಿವೇಶನ ಕೊಡಿಸುತ್ತೆವೆಂದು ತಂದೆ ಮಗ ಸೇರಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ವಂಚನೆ ಮಾಡಿದ ಘಟನೆ ಹುಬ್ಬಳ್ಳಿಯ...Read more" } ", "keywords": "Hubballi, Job Scam, Father Son Arrested, Fraud Case, Karnataka Crime, Hubballi Police, Job Fraud, Cheating Case.,Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿ: ನೌಕರಿ ಕೊಡಿಸೋದಾಗಿ 61.25 ಲಕ್ಷ ರೂ. ವಂಚನೆ - ತಂದೆ, ಮಗನ ಬಂಧನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೌಕರಿ ಕೊಡಿಸೋದಾಗಿ 61.25 ಲಕ್ಷ ರೂ. ವಂಚನೆ - ತಂದೆ, ಮಗನ ಬಂಧನ

ಹುಬ್ಬಳ್ಳಿ: ನೌಕರಿ ಮತ್ತು ಖಾಲಿ ನಿವೇಶನ ಕೊಡಿಸುತ್ತೆವೆಂದು ತಂದೆ ಮಗ ಸೇರಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ವಂಚನೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ವಂಚನೆ ಮಾಡಿದ ತಂದೆ ಮಗನನ್ನು ವಿದ್ಯಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು. ರಾಜೇಂದ್ರ ಕೊಕಟನೂರು ಹಾಗೂ ಕಾರ್ತಿಕ ಕೊಕಟನೂರು ವಂಚಿಸಿ ಸಿಕ್ಕಿಬಿದ್ದ ಆರೋಪಿಗಳು. ಇವರು ಮಿಥುನ ತೋಡಕರ ಎಂಬ ವ್ಯಕ್ತಿಗೆ ನೌಕರಿ ಮತ್ತು ಖಾಲಿ ನಿವೇಶನವನ್ನು ಕೊಡಿಸುತ್ತೇನೆಂದು ಆತನಿಂದ ಬೇರೊಬ್ಬರಿ 61.25 ಲಕ್ಷ ರೂಪಾಯಿ ಹಣವನ್ನು ಹಂತ ಹಂತವಾಗಿ ಪಡೆದುಕೊಂಡು ವಂಚನೆ ಮಾಡಿದ್ದಾರೆ.

ರಾಜೇಂದ್ರ ಮತ್ತು ಕಾರ್ತಿಕ ಎಂಬ ತಂದೆ ಮಗ ಸೇರಿಕೊಂಡು ಮಿಥುನ ಜೊತೆ ಸ್ನೇಹ ಬೆಳೆಸಿ ಅವನೊಂದಿಗೆ ನಿನಗೆ ಕೆಲಸ ಕೊಡಿಸುತ್ತೇವೆ. ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದೆ ಎಂದು ನಂಬಿಸಿ, ನಿನಗೆ ನಾವು ಸಹಾಯ ಮಾಡುತ್ತೇವೆಂದು ಹೇಳಿ ಹಂತ ಹಂತವಾಗಿ ನಂಬಿಸಿ ಅವರಿಂದ ಸುಮಾರು 61.25 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ.

ಸದ್ಯ ತಂದೆ, ಮಗನ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಈ ಇಬ್ಬರನ್ನು ವಿದ್ಯಾನಗರ ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐ ಶ್ರೀಮಂತ ಕೆ. ನೇತೃತ್ವದಲ್ಲಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2025 02:51 pm

Cinque Terre

78.91 K

Cinque Terre

11

ಸಂಬಂಧಿತ ಸುದ್ದಿ