ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಚಾಕಲಬ್ಬಿ ಯಲ್ಲಮ್ಮದೇವಿ ದೇಗುಲ ಪ್ರವೇಶ - ಭಕ್ತ ಗಣ ಭಾಗಿ

ಕುಂದಗೋಳ: ಸಂತ ಶಿಶುನಾಳ ಶರೀಫ ಶಿವಯೋಗಿಗಳಿಗೆ ಚಿಲುಮೆ ನೀಡಿದ ತಾಯಿ ಚಾಕಲಬ್ಬಿ ಯಲ್ಲಮ್ಮದೇವಿ ದೇಗುಲ ಪ್ರವೇಶ ಕಾರ್ಯಕ್ರಮ ಅತಿ ಸಂಭ್ರಮದಿಂದ ನೆರವೇರಿದೆ.

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಯಲ್ಲಮ್ಮದೇವಿ ನೂತನ ದೇಗುಲ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಇದೇ ಫೆಬ್ರವರಿ 21ರಂದು ಆಲಯ ಪ್ರವೇಶ, ವಾಸ್ತು ಶಾಂತಿ ಫೆಬ್ರವರಿ 22ರಂದು ಗಂಗಾಪೂಜೆ, ಗೋ ಪೂಜೆ, ದೇಗುಲ ಉದ್ಘಾಟನೆ, ಫೆಬ್ರವರಿ 23ರಂದು ಕಳಸಾರೋಹಣ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಿನ್ನೆ ಮಂಗಳವಾರ ನೂತನ ದೇಗುಲಕ್ಕೆ ಯಲ್ಲಮ್ಮದೇವಿ ಪ್ರವೇಶವನ್ನು ಮೊದಲು ಗೋ ಮಾತೆಯನ್ನು ದೇಗುಲ ಪ್ರವೇಶಿಸಿ ಬಳಿಕ ಯಲ್ಲಮ್ಮದೇವಿ ದೇಗುಲ ಪ್ರವೇಶ ಮಾಡಲಾಗಿದೆ. ಕಾರ್ಯಕ್ರಮ ಅಂಗವಾಗಿ ತಳಿರು ತೋರಣಗಳಿಂದ ದೇವಸ್ಥಾನ ಅಲಂಕರಿಸಿ ಸುಮಂಗಲೆಯರಿಂದ ಕುಂಭ ಕೋಡಗಳನ್ನು ಹೊತ್ತು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಚಾಕಲಬ್ಬಿ ಗ್ರಾಮದ ಭಕ್ತಾದಿಗಳು, ಶರಣರು, ಸ್ವಾಮೀಜಿಗಳು ಉಪಸ್ಥಿತರಿದ್ದರು.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

05/02/2025 04:15 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ