", "articleSection": "Politics,Infrastructure,Government,News,Public News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1738577183-V4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಮಹದಾಯಿ ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿ. ಇದೇ ಮಹದಾಯಿಗಾಗಿ ಅನ್ನದಾತರು ಹೋರಾಟ ಮಾಡಿದ್ದು ಆಯಿತು, ಜೈಲೂಟ ಉಂಡಿದ್ದು ಆಯಿತು. ಆ...Read more" } ", "keywords": ",Hubballi-Dharwad,Politics,Infrastructure,Government,News,Public-News,Agriculture", "url": "https://publicnext.com/node" }
ಹುಬ್ಬಳ್ಳಿ: ಮಹದಾಯಿ ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿ. ಇದೇ ಮಹದಾಯಿಗಾಗಿ ಅನ್ನದಾತರು ಹೋರಾಟ ಮಾಡಿದ್ದು ಆಯಿತು, ಜೈಲೂಟ ಉಂಡಿದ್ದು ಆಯಿತು. ಆದ್ರೂ ಮಹದಾಯಿ ಮಕ್ಕಳಿಗೆ ಹನಿ ನೀರು ಸಿಕ್ಕಿಲ್ಲ. ಕನಿಷ್ಠ ಪ್ರಮಾಣದ ಅರಣ್ಯ ಬಳಕೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೇಳಿದೆ. ರಾಜ್ಯ ಸರ್ಕಾರದ ವರದಿಗೆ ಕೇಂದ್ರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಮಾಡಲು ಮುಂದಾಗಿದೆ.
ಮಹದಾಯಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಚೆಲ್ಲಾಟ ಆಡುತ್ತಿವೆ. ಕೇಂದ್ರದ ಮೇಲೆ ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಬೆಟ್ಟು ಮಾಡುತ್ತಾ ಕಾಲಹರಣ ಮಾಡ್ತಿವೆ. ಇದರಿಂದಾಗಿ ಉತ್ತರ ಕರ್ನಾಟಕ ಮಂದಿಗೆ ಮಹದಾಯಿ ಮಡಿಕೆಯೊಳಗಿನ ಬೆಣ್ಣೆಯಂತಾಗಿದೆ. ಜನಪ್ರತಿನಿಧಿಗಳು ಕುಂಟು ನೆಪವನ್ನೇ ಹೇಳುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸರ ಇಲಾಖೆಯ ಅನುಮತಿಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿವೆ. ಅಲ್ಲದೇ ಕೇಂದ್ರಕ್ಕೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನ ರಾಜ್ಯ ಸರ್ಕಾರ ನೀಡಿದೆ. ರಾಜ್ಯ ಸರ್ಕಾರದ ವರದಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಅಲ್ಲದೇ ಕೇಂದ್ರದ ಪರಿಶೀಲನಾ ಸಭೆ ಕಾಲಹರಣ ತಂತ್ರ ಮಾಡುತ್ತಿದೆ. ಅದಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ನಡೆಸಲು ರಾಜ್ಯ ಸರ್ಕಾರ ಮತ್ತು ರೈತರು ಮುಂದಾಗಿದ್ದಾರೆ.
ಮಹದಾಯಿ ಯೋಜನೆಗೆ 71 ಎಕರೆ ಅರಣ್ಯ ಭೂಮಿ ಬಳಸಲು ಅನುಮೋದನೆ ನೀಡುವಂತೆ ರಾಜ್ಯ ಸರಕಾರ ಕೇಂದ್ರದ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದ್ರೆ ಇದಕ್ಕೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ನಡೆ ರಾಜ್ಯದ ಜನತೆಗೆ ಮತ್ತಷ್ಟು ನಿರಾಸೆ ಮೂಡಿಸಿದೆ. ಕೇಂದ್ರ ಅನುಮತಿ ನೀಡಿದರೆ ಕಾಮಗಾರಿ ನಡೆಸುವುದಾಗಿ ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರವು ಉಲ್ಲೇಖಿಸಿತ್ತು. ಆದ್ರೆ ಇಲ್ಲಿಯವರೆಗೂ ಕೇಂದ್ರ ವನ್ಯ ಜೀವಿ ಮಂಡಳಿ ಅನುಮತಿ ಕೊಡದೆ ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದೆ. ಇದರಿಂದ ರೊಚ್ಚಿಗೆದ್ದ ರಾಜ್ಯ ಸರ್ಕಾರ ಕೇಂದ್ರಕ್ಕೆ ಎರಡು ತಿಂಗಳು ಸಮಯಾವಕಾಶ ನೀಡಿದೆ. ಎರಡು ತಿಂಗಳ ಬಳಿಕ ಕಾನೂನು ಹೋರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
03/02/2025 03:36 pm