", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1738752901-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಿಗೆ ಸರ್ಕಾರ 50 ಸಾವಿರ ಹಣ ಕೊಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಡಿರುವ ಆರ...Read more" } ", "keywords": "Dharwad, Minister Lad, Revenue Minister, Karnataka News, Dharwad News, Tax Allocation, Revenue Distribution, Government Funding, Minister Response, Political News. ,Hubballi-Dharwad,Politics", "url": "https://publicnext.com/node" }
ಧಾರವಾಡ: ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಿಗೆ ಸರ್ಕಾರ 50 ಸಾವಿರ ಹಣ ಕೊಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಡಿರುವ ಆರೋಪಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಸರ್ಕಾರದ ತೆರಿಗೆ ಹಣದಿಂದಲೇ ಹಣ ಕೊಡಬೇಕಲ್ಲವೇ? ಮತ್ತೆ ಬೇರೆ ಯಾವುದರಿಂದ ಕೊಡಬೇಕು? ರೇವಣ್ಣ ಅವರಿಗೆ ಹಾಗೂ ನಮಗೆ ಟಿಎ, ಡಿಎ ಎಲ್ಲಿಂದ ಬರುತ್ತದೆ? ತೆರಿಗೆ ಹಣದಿಂದಲೇ ಅಲ್ಲವೇ? ಸಮಿತಿ ಅಧ್ಯಕ್ಷರೆಂದ ಮೇಲೆ ಅವರಿಗೆ ಹಣ ಕೊಡಬೇಕಲ್ಲವೇ? ಅದಕ್ಕೆ ತೆರಿಗೆಯಿಂದ ಅವರಿಗೆ ಹಣ ಕೊಡಲಾಗುತ್ತಿದೆ ಎಂದರು.
ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಲಾಡ್, ಅಲ್ಲಿ ಈ ಬಾರಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಅಲ್ಲಿ ನಮಗೆ 4-5 ಸ್ಥಾನ ಬರುತ್ತವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ರಾಹುಲ್ ಗಾಂಧಿಯವರ ತತ್ವ ಸಿದ್ಧಾಂತವನ್ನು ಜನರಿಗೆ ಮುಟ್ಟಿಸಬೇಕಿದೆ. ರಾಹುಲ್ ಪಾದಯಾತ್ರೆಯ ಬಳಿಕ ಬಿಜೆಪಿಯವರ ಚಾರ್ ಸೌ ಪಾರ್ 240ಕ್ಕೆ ಬಂದು ನಿಂತಿದೆ. ರಾಹುಲ್ ಎಫೆಕ್ಟ್ ಏನಿದೆ ಅನ್ನೋದಕ್ಕೆ ಇದು ಸಾಕ್ಷಿ. ನಾವು ಕಾಟಾಚಾರಕ್ಕೆ ಮಾತನಾಡೋದಿಲ್ಲ. ಬಿಜೆಪಿ ಮುಕ್ತ ಭಾರತ ಅಂತಾ ಹೇಳೋದಿಲ್ಲ. ನಾವು ಖಂಡಿತ ಮುಂದೆ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನಾವು ಅಂದುಕೊಂಡಷ್ಟು ಸೀಟು ಬರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಚುನಾವಣೆ ಗೆಲ್ಲೋದಕ್ಕೆ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಅವರು ಗೆಲ್ಲುತ್ತಿದ್ದಾರೆ. ಬಿಜೆಪಿ ಯಾವುದೇ ಪರ್ ಫಾರ್ಮೆನ್ಸ್ ಮೇಲೆ ಗೆಲ್ಲೋದಿಲ್ಲ. ಎಲ್ಲ ವ್ಯವಸ್ಥೆ ದುರುಪಯೋಗಪಡಿಸಿಕೊಂಡು ಗೆಲ್ಲುತ್ತದೆ. ಇಡಿ, ಸಿಬಿಐ ಬಳಸಿಕೊಂಡು ಕೆಲಸ ಸಾಧಿಸುತ್ತೆ. ಮತದಾರರ ಲಿಸ್ಟ್‌ನಲ್ಲಿ ಬದಲಾವಣೆ ಮಾಡಿ ಗೆಲ್ಲುತ್ತೆ. ಪ್ರಜಾಪ್ರಭುತ್ವ ವ್ಯವಸ್ಥೆ ರೀತಿಯಲ್ಲಿ ಚುನಾವಣೆ ಮಾಡಿದರೆ ಬಿಜೆಪಿ ಗೆಲ್ಲೋದಿಲ್ಲ ಎಂದರು.
ದೆಹಲಿ ಚುನಾವಣೆ ನಂತರ ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ವಿಚಾರ ನಾನು ಕೇಳಿಲ್ಲ. ಬಿಜೆಪಿ ಕಾರ್ಯಕರ್ತರು ಗಡ್ಕರಿಯವರನ್ನು ಮುಂಚೂಣಿಗೆ ತರುವಂತೆ ಹೇಳುತ್ತಿದ್ದಾರೆ. ಮೋದಿಯಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ ಅನ್ನುತ್ತಿದ್ದಾರೆ. ಬಿಜೆಪಿ ಮುಖಂಡರು ನಮಗೆ ಹೇಳುತ್ತಿದ್ದಾರೆ. ಅದನ್ನು ನಿಮ್ಮ ಮೂಲಕ ಹೇಳುತ್ತಿದ್ದೇನೆ. ದೇಶಪ್ರೇಮಿ ಬಿಜೆಪಿಗರು ಈ ರೀತಿ ಹೇಳುತ್ತಿದ್ದಾರೆ. ಕಮಲ, ಕೈ ಎರಡೂ ಪಕ್ಷದಲ್ಲಿ ದೇಶಪ್ರೇಮಿಗಳಿದ್ದಾರೆ. ವಿಶ್ವಗುರು ಸ್ಥಾನದಿಂದ ಕುಸಿದು ಹೋಗಿದ್ದಾರೆ. ಅದು ದೇಶಪ್ರೇಮಿ ಬಿಜೆಪಿಗರಿಗೆ ಗೊತ್ತಿದೆ. ಅಂತಹವರು ಮೋದಿಯನ್ನು ತೆಗೆಯಬೇಕು ಅಂತಿದ್ದಾರೆ. ನಿತಿನ್ ಗಡ್ಕರಿಯನ್ನು ಮೇಲೆ ತರಬೇಕು ಅನ್ನುತ್ತಿದ್ದಾರೆ ಎಂದರು.
Kshetra Samachara
05/02/2025 04:25 pm