ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಂಟಿ ಜೊತೆ ಯುವಕನ ಲವ್ವಿ ಡವ್ವಿ - ಬೆತ್ತಲೆ ಮಾಡಿ ಏರಿಯಾದಲ್ಲಿ ಮೆರವಣಿಗೆ ಮಾಡಿದ್ದ 9ಜನ ಜೈಲಿಗೆ

ಹುಬ್ಬಳ್ಳಿ - ಕಳೆದ ಎರಡು ದಿನಗಳ ಹಿಂದೆ ಅಲ್ಲಿ ಅಮಾನವೀಯ ಕೃತ್ಯವೊಂದು ನಡೆದಿತ್ತು. ವಿವಾಹಿತ ಮಹಿಳೆ ಜೊತೆ ಮಾತನಾಡಿದ ಎಂಬ ಕಾರಣಕ್ಕೆ ಯುವಕನನ್ನು ಬೆತ್ತಲು ಮಾಡಿ ಥಳಿಸಲಾಗಿತ್ತು. ಸಿಕ್ಕ ಸಿಕ್ಕಲ್ಲಿ ಬ್ಲೇಡ್‌ನಿಂದ ಕುಯ್ಯಲಾಗಿತ್ತು. ಯುವಕನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಗ್ಯಾಂಗ್, ಆತನನ್ನ ಬೆತ್ತಲು ಮಾಡಿ ಮನೆ ಹತ್ರ ಬಿಟ್ಟು ಹೋಗಿದ್ರು.. ಇದೀಗ ಯುವಕನನ್ನು ಬೆತ್ತಲು ಮಾಡಿದ ಗ್ಯಾಂಗ್‌ಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ.

ಬೆತ್ತಲು ಮಾಡಿ‌ ಹಲ್ಲೆ ಮಾಡಿದ 9 ಜನರನ್ನ ಪಬ್ಲಿಕ್ ನೆಕ್ಸ್ಟ್ ವರದಿ ಬಳಿಕ ಪೊಲೀಸರು ಜೈಲಿಗಟ್ಟಿದ್ದಾರೆ. ಇತ್ತ ಹಲ್ಲೆಗೊಳಗಾದ ಯುವಕ ಕೂಡ ಅರೆಸ್ಟ್ ಆಗಿದ್ದಾನೆ. ಈ ವಿಚಿತ್ರ ಎನಿಸುವ ಘಟನೆಯ ಹಿಂದೆ ನಡೆದಿದ್ದೇನು ಅನ್ನೋದನ್ನ ಹೇಳ್ತೀವಿ ಕೇಳಿ

ಹುಬ್ಬಳ್ಳಿಯ ಟಿಪ್ಪು ನಗರದ ನಿವಾಸಿಯಾಗಿದ್ದ ಇದೇ ಮುಜಾಫೀರ್‌ನನ್ನ ಬೆತ್ತಲು ಮಾಡಿ ಹಲ್ಲೆ ಮಾಡಲಾಗಿತ್ತು. ಇದಕ್ಕೆಲ್ಲ ಕಾರಣ ಮುಜಾಫೀರ್ ಮಾಡಿದ ಒಂದು ಕೆಲಸ. ಟಿಪ್ಪು ನಗರದ ನಿವಾಸಿಯಾಗಿರೋ ಮುಜಾಫೀರ್ ವಿವಾಹಿತ ಮಹಿಳೆ ಜೊತೆ ಮಾತಾಡಿದ್ದ. ಇದು ಆ ಮಹಿಳೆಯ ಮನೆಯವರಿಗೆ ಗೊತ್ತಾಗಿತ್ತು

. ಪಕ್ಕದ ಮನೆ ಮಹಿಳೆ ಜೊತೆ ಕದ್ದು ಮುಚ್ಚಿ ಮಾತಾಡತಿದ್ದ, ಮುಜಾಫೀರ್ ಅವರ ಕೈಗೆ ತಗಲಾಕೊಂಡಿದ್ದ. ಈ ವಿಚಾರ ಮಹಿಳೆ ಮನೆಯವರ ತಲೆ ಕೆಡಿಸಿತ್ತು. ಹೀಗಾಗಿ ಮಹಿಳೆ ಮನೆಯವರು ಮುಜಾಫೀರ್‌ನನ್ನ ಕಿಡ್ನ್ಯಾಪ್ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ರು. ಹುಬ್ಬಳ್ಳಿ ಹೊರವಲಯದ ಗಬ್ಬೂರು,

ವರೂರ್ ಬಳಿ ಮುಜಾಫೀರ್‌ಗೆ ಥಳಿಸಲಾಗಿತ್ತು. ಈ ಘಟನೆ ಬಗ್ಗೆ ಈ ವೇಳೆ ಮಾತನಾಡಿದ ಹುಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕೊಲೆ ಯತ್ನದ ಆರೋಪದಡಿ 9 ಜನರನ್ನು ಅರೆಸ್ಟ್ ಮಾಡಿದ್ದೇವೆ,ಆದ್ರೆ ತನಿಖೆಯಲ್ಲಿ ಬೆತ್ತಲು ಮಾಡಿ ಮೆರವಣಿಗೆ ಮಾಡಿರೋದು ಕಂಡು ಬಂದಿಲ್ಲ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಮುಜಾಫೀರ್ ಜೊತೆ ವಿವಾಹಿತ ಮಹಿಳೆ ಜೊತೆ ಸಂಪರ್ಕ ದಲ್ಲಿದ್ದ ಎನ್ನಲಾಗಿದೆ.ಕೆಲ ಸಲ ಬುದ್ದಿ ಹೇಳಿದರೂ ಬಿಟ್ಡಿರಲಿಲ್ಲ.ಆದ್ರೆ ಮೊನ್ನೆ ರೆಡ್ ಹ್ಯಾಂಡ್ ಆಗಿ ಸಿಕ್ಕಾಗ ಮಹಿಳೆ ಮನೆಯವರು ರೊಚ್ಚಿಗೆದ್ದಿದ್ದರು. ತೀರಾ ವಿಕೋಪಕ್ಕೆ ಹೋದಾಗ ಮುಜಾಫೀರ್‌ನನ್ನ ಕೆಲಸ ಮಾಡೋ ಜಾಗದಿಂದ ಕಿಡ್ನ್ಯಾಪ್ ಮಾಡಿ ಮನ ಬಂದತೆ ಥಳಿಸಿದ್ದಾರೆ. ನಂತರ ಆತನನ್ನ ಬೆತ್ತಲು ಮಾಡಿ ಏರಿಯಾದಲ್ಲಿ ಬಿಟ್ಟು ಹೋಗಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇತ್ತ ಹಲ್ಲೆಗೊಳಾಗದ ಮುಜಾಫೀರ್ ಕೂಡಾ ಜೈಲು ಸೇರಿದ್ದಾನೆ.

ಬೆತ್ತಲು ಮಾಡಿ ಥಳಿಸಿದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಘಟನೆ ನಡೆದ ಜಾಗ, ಹಾಗೂ ಮಹಿಳೆಯ ಮನೆ ಮತ್ತು ಮುಜಾಫೀರ್ ಮನೆಯವರನ್ನ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತು ಕುಟುಂಬಸ್ಥರರಿಗೆ ಧೈರ್ಯ ತುಂಬಿದರು.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 05:29 pm

Cinque Terre

51.97 K

Cinque Terre

4

ಸಂಬಂಧಿತ ಸುದ್ದಿ