", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1737641006-WhatsApp-Image-2025-01-23-at-7.33.18-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ತಮ್ಮ ಮಗಳ ಸಾವಿಗೆ ಆಕೆಯ ಗಂಡ ಹಾಗೂ ಕುಟುಂಬಸ್ಥರೇ ಕಾರಣ ಎಂಬ ಗಂಭೀರ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಕೌಶರ್ ಚೌದರಿ ...Read more" } ", "keywords": "Hubballi, Kaushar Chaudhari, Suicide Twist, Police Investigation, Husband Arrested, Mystery Death, Karnataka Crime News, Hubballi Police, Suicide Case.,Hubballi-Dharwad,Crime", "url": "https://publicnext.com/node" } ಹುಬ್ಬಳ್ಳಿ: ಕೌಶರ್ ಚೌದರಿ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ - ಆಕೆ ಗಂಡನನ್ನು ಬಂಧಿಸಿದ ಪೊಲೀಸರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೌಶರ್ ಚೌದರಿ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ - ಆಕೆ ಗಂಡನನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ: ತಮ್ಮ ಮಗಳ ಸಾವಿಗೆ ಆಕೆಯ ಗಂಡ ಹಾಗೂ ಕುಟುಂಬಸ್ಥರೇ ಕಾರಣ ಎಂಬ ಗಂಭೀರ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಕೌಶರ್ ಚೌದರಿ ಗಂಡನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

2018ರಲ್ಲಿ ಹುಬ್ಬಳ್ಳಿಯ ಬ್ಯಾಳಿ ಪ್ಲಾಟ್‌ನ ಸಾದಿಕ್ ಬಟನವಾಲೆ ಜೊತೆಗೆ ಗಣೇಶ್ ಪೇಟ್ ನಿವಾಸಿ ಕೌಶರ್ ಚೌದರಿ ಎಂಬ ಯುವತಿಯನ್ನು ಮದುವೆ ಮಾಡಿಕೊಡಲಾಗಿತ್ತು. ಮುದ್ದಾದ ಮೂರು ಹೆಣ್ಣು ಮಕ್ಕಳು ಸಹ ಇದ್ದರು. ಆಕೆಯ ಗಂಡ ಮತ್ತು ಕುಟುಂಬಸ್ಥರು ಸೇರಿ ದಿನಂಪ್ರತಿ ಕಿರುಕುಳ ನೀಡುತ್ತಿದ್ದರಂತೆ. ಮನನೊಂದು ಕೌಶರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಇದು ಆತ್ಮಹತ್ಯೆ ಅಲ್ಲ ಎಂದು ಕೌಶರ್ ಕುಟುಂಬದವರು ದೂರು ದಾಖಲಿಸಿ ಆರೋಪ ಮಾಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆಕೆಯ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಏನು ಹೇಳಿದ್ದಾರೆ ಕೇಳಿ.

ಒಟ್ಟಿನಲ್ಲಿ ಕೌಶರ್ ಚೌದರಿ ಸಾವಿನ ಹಿಂದೆ ಇನ್ನೂ ಯಾರ‍್ಯಾರು ಇದ್ದಾರೆ ಎಂಬುದು ತನಿಖೆ‌ ನಂತರವೇ ಗೊತ್ತಾಗಲಿದೆ. ಆದ್ದರಿಂದ ಪೊಲೀಸರು ಸೂಕ್ತ ತನಿಖೆ ಮಾಡಿ ಕೌಶರ್ ಹಾಗೂ ಆಕೆ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲಿ ಎಂಬುದೇ ಎಲ್ಲರ ಒತ್ತಾಯ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 07:33 pm

Cinque Terre

56.6 K

Cinque Terre

4

ಸಂಬಂಧಿತ ಸುದ್ದಿ