", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1737611695-sava.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಆಕೆ ಬಡ ಕುಟುಂಬದ ಮಗಳು, ಖುಷಿಯಾಗಿ ಇರಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ರು, ಆದ್ರೆ ಆ ಮನೆಮಗಳು ಇಲ್ಲ ಎಂಬ ಸ...Read more" } ", "keywords": "Hubballi, Koushar Chaudhari, Mysterious Death, Family Allegations, Karnataka News, Hubballi News, Crime News, Suspicious Death, Investigation, Police Probe.,Hubballi-Dharwad,Crime,Law-and-Order", "url": "https://publicnext.com/node" }
ಹುಬ್ಬಳ್ಳಿ : ಆಕೆ ಬಡ ಕುಟುಂಬದ ಮಗಳು, ಖುಷಿಯಾಗಿ ಇರಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ರು, ಆದ್ರೆ ಆ ಮನೆಮಗಳು ಇಲ್ಲ ಎಂಬ ಸುದ್ದಿ ಕೇಳಿ, ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ಮಗಳ ಸಾವಿಗೆ ಆಕೆ ಗಂಡ ಹಾಗೂ ಕುಟುಂಬಸ್ಥರೇ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಕಥೆ ಅಂತಿರಾ ಇಲ್ಲಿದೆ ನೋಡಿ...
ಹೌದು...ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗಿ ಅಲ್ಲಾ, ಅವಳ ಸಾವಿನ ಹಿಂದೆ ನಮಗೆ ಅನುಮಾನ ಇದೆ ಎಂದು ಕಣ್ಣೀರು ಹಾಕುತ್ತಿರುವ ತಂದೆ ತಾಯಿ, ಇಂತಹ ದೃಶ್ಯ ಕಂಡುಬಂದಿದ್ದು ಹುಬ್ಬಳ್ಳಿಯಲ್ಲಿ.
2018ರಲ್ಲಿ ಬ್ಯಾಳಿ ಪ್ಯ್ಲಾಟ್‌ನ ಸಾದಿಕ್ ಬಟನವಾಲೆ ಜೊತೆಗೆ ಗಣೇಶ್ ಪೇಟ್ ನಿವಾಸಿ ಕೌಶರ್ ಚೌದರಿ ಎಂಬ ಯುವತಿಯನ್ನ ಮದುವೆ ಮಾಡಿಕೊಡಲಾಗಿತ್ತು. ಮುದ್ದಾದ ಮೂರು ಮಕ್ಕಳು ಕೂಡ ಇದ್ದವು. ಆದ್ರೆ ಇತ್ತೀಚಿಗೆ ಸಾದಿಕ್ ಪತ್ನಿ ಕೌಶರ್‌ಗೆ ಕಿರುಕುಳ ನೀಡುತ್ತಿನಂತೆ. ಹೀಗಾಗಿ ಕೌಶರ್ ನಾಲ್ಕು ತಿಂಗಳ ಹಿಂದೆ ತನ್ನ ತಾಯಿ ಮನೆಗೆ ಬಂದಿದ್ಲೂ. ಇದಾದ ಬಳಿಕ ಗಂಡನ ಮನೆಯವರು ಮತ್ತೆ ಆಕೆಯನ್ನು ಮೊನ್ನೆ ಅಂದರೆ ರವಿವಾರ ಕರೆದುಕೊಂಡು ಹೋಗಿದ್ದರು.
ಹೋಗುವಾಗ ಕೌಶರ್ ನಗುತ್ತಲೇ ಹೋಗಿದ್ಲಂತೆ. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಗಂಡನ ಮನೆಯವರು ವಿವೇಕಾನಂದ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೌಶರ್ ಉಸಿರು ಚೆಲ್ಲಿದ್ದಾಳೆ. ಆಸ್ಪತ್ರೆ ಎದುರು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮುದ್ದಾದ ಮಗಳನ್ನ ಕಟುಕನಿಗೆ ಕೊಟ್ಟವಲ್ಲಾ ಎಂದು ಕುಟುಂಬಸ್ಥರು ನೊಂದು, ಅವಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
'ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲಾ. ಅವಳ ಸಾವಿಗೆ ಪತಿ ಶಾದಿಕ್ ಹಾಗೂ ಅವನ ಕುಟುಂಬಸ್ಥರೇ ಕಾರಣ ಎಂದುಕೌಶರ್ ಮನೆಯವರು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಶಾದಿಕ್ ಹಾಗೂ ಕುಟುಂಬಸ್ಥರನ್ನ ಕರೆಸಿ ಸೂಕ್ತವಾದ ತನಿಖೆ ಮಾಡಲಿ, ಅಂದಾಗ ಸತ್ಯ ಹೊರಬಿಳ್ಳುತ್ತೆ ಎಂದು ಪೋಷಕರು ಒತ್ತಾಯಿಸಿದ್ದಾರೆ.
ಒಟ್ನನಲ್ಲಿ ಕೌಶರ್ ಸಾವಿಗೆ ನಿಜವಾದ ಕಾರಣ ಏನು..? ಆಕೆ ಸಾವಿನ ಹಿಂದೆ ಯಾರಿದ್ದಾರೆ ಎಂಬುದನ್ನ ತನಿಖೆ ಮೂಲಕ ಪತ್ತೆ ಹಚ್ಚಿ ಕುಟುಂಬಸ್ಥರಿಗೆ ನ್ಯಾಯ ದೊರಕಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 11:25 am