ಮಹಾಕುಂಭ 2025ರಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಭೋಸ್ಲೆ ಎಂಬ ಯುವತಿ ತಮ್ಮ ಸೌಂದರ್ಯದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರು. ಇದೀಗ ಅವರು ಮೇಕ್ ಓವರ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮೊನಲಿಸಾ, ಶಿಪ್ರಾ ಮೇಕ್ ಓವರ್ ಬ್ಯೂಟಿ ಸಲೂನ್‌ನಲ್ಲಿ ತಮ್ಮ ಕೂದಲು ಮತ್ತು ಮೇಕಪ್ ಮಾಡಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಕೆಂಪು ಬಣ್ಣದ ಸೀರೆಯಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದಾರೆ.
ಮಹಾಕುಂಭದಲ್ಲಿ ಮೊನಲಿಸಾ ಅವರ ಕಂದು ಬಣ್ಣದ ಕಣ್ಣುಗಳು ಎಲ್ಲರ ಗಮನ ಸೆಳೆದಿದ್ದವು. ಅವರನ್ನು ಚಿತ್ರೀಕರಿಸಲು ಅನೇಕರು ಮುಗಿಬಿದ್ದಿದ್ದರು.
PublicNext
23/01/2025 10:49 am