", "articleSection": "Cinema,Viral", "image": { "@type": "ImageObject", "url": "https://prod.cdn.publicnext.com/s3fs-public/387839-1737555037-WhatsApp-Image-2025-01-22-at-7.37.37-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿ ಸಿಬ್ಬಂದಿ ಮೇಲೆ ಲಾಯರ್ ಜಗದೀಶ್ ಹಲ್ಲೆಗೆ ಮುಂದಾಗಿರುವ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಕ್ಯಾಮೆರಾ...Read more" } ", "keywords": "format: Lawyer Jagadish, Security Personnel, Alleged Misbehavior, Rowdy Behavior, Netizens React, Controversy, Viral Video, Karnataka News.,,Cinema,Viral", "url": "https://publicnext.com/node" }
ಬೆಂಗಳೂರು: ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿ ಸಿಬ್ಬಂದಿ ಮೇಲೆ ಲಾಯರ್ ಜಗದೀಶ್ ಹಲ್ಲೆಗೆ ಮುಂದಾಗಿರುವ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವಾಜ್ ಹಾಕಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು, ಈ ಜಗ್ಗಂದು ಯಾಕೋ ಅತಿ ಆಯಿತು ಕಂಡ ಕಂಡಲ್ಲಿ ರೌಡಿಸಂ ಮಾಡ್ತಾ ಇದ್ದಾನೆ. ಮೈ ಮರೆತು ದುರಂಕಾರದಲ್ಲಿ ಮೆರೆಯುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯಮೇಲೆ ಯಾವುದೇ ಕಾರಣವಿಲ್ಲದೆ ಅದು ಸಾರ್ವಜನಿಕವಾಗಿ ಹಲ್ಲೆ ಮತ್ತು ಮಾನನಷ್ಟ ಮಾಡ್ತಿದ್ದಾನೆ ಅಂತ ಆ ಜಗ್ಗನ ಮೇಲೆ ಕೇಸ್ ಮಾಡಿ. ಅದಕ್ಕೆ ಸಾಕ್ಷಿಯಾಗಿ ವಿಡಿಯೋ ಇದೆ ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.
ವೈರಲ್ ಆಗಿರುವ ಲಾಯರ್ ಜಗದೀಶ್ ವಿಡಿಯೋವನ್ನು (Nirmala Shetty, nimmu___doll) ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ.
ಭದ್ರತಾ ಸಿಬ್ಬಂದಿ ಕಾರ್ ತೆಗೆದುಕೊಂಡು ಮತ್ತೊಂದು ಗೇಟ್‌ಗೆ ಬನ್ನಿ ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಜಗದೀಶ್, ಏನ್ ಹೇಳಿದ್ದೀಯಾ ನೀನು? ಏಯ್ ಯಾರೋ ನೀನು? ಐಡಿ ಕಾರ್ಡ್ ಎಲ್ಲಿ ನಿಂದು? ಮೊದಲು ಐಡಿ ಕಾರ್ಡ್ ಹಾಕಿ ಮಾತನಾಡು. ನಾನು ಸಿಟಿಜನ್ ಎಂದು ಹೇಳಿ ಹೊಟ್ಟೆಯಿಂದ ಭದ್ರತಾ ಸಿಬ್ಬಂದಿಯನ್ನು ತಮ್ಮ ಹೊಟ್ಟೆಯಿಂದ ದೂಡುತ್ತಾ ಜಗದೀಶ್ ಮುಂದೆ ಹೋಗ್ತಾರೆ.
ನಾನು ಸಿಟಿಜನ್, ನನಗೆ ಇಲ್ಲಿ ಅಪಾಯಿಂಟ್‌ಮೆಂಟ್ ಇದೆ. ನೀನು ಯಾವನೋ ಹೇಳೋದಕ್ಕೆ ಎಂದು ಭದ್ರತಾ ಸಿಬ್ಬಂದಿಗೆ ಸಾರ್ವಜನಿಕವಾಗಿಯೇ ಲಾಯರ್ ಜಗದೀಶ್ ಬೆದರಿಕೆ ಹಾಕಿದ್ದಾರೆ. ಕಾರ್ ಪಾರ್ಕ್ ಮಾಡುವ ವಿಷಯಕ್ಕಾಗಿ ಭದ್ರತಾ ಸಿಬ್ಬಂದಿಯೊಂದಿಗೆ ಲಾಯರ್ ಜಗದೀಶ್ ದರ್ಪ ಮರೆದಿದ್ದಾರೆ ಎಂದು ಶೀರ್ಷಿಕೆಯಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
PublicNext
22/01/2025 07:42 pm