", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1737479820-WhatsApp-Image-2025-01-21-at-10.40.05-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಕಚೇರಿಯಲ್ಲಿ ಇಂದು ಸರಣಿ ಸಭೆಗಳು ನಡೆದವು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೇತೃತ್ವದಲ್...Read more" } ", "keywords": "Bangalore: What happened in the BJP meeting? What is Agrawal's advice to MLAs? Why are Rebels absent from the meeting?,,Politics", "url": "https://publicnext.com/node" } ಬೆಂಗಳೂರು : ಬಿಜೆಪಿ ಸಭೆಯಲ್ಲಿ ಏನೇನಾಯ್ತು.! ಶಾಸಕರಿಗೆ ಅಗರವಾಲ್ ಮಾಡಿದ ತಾಕೀತು ಏನು..? ಸಭೆಗೆ ರೆಬಲ್ಸ್ ಗೈರಾಗಿದ್ದು ಯಾಕೆ..?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಜೆಪಿ ಸಭೆಯಲ್ಲಿ ಏನೇನಾಯ್ತು.! ಶಾಸಕರಿಗೆ ಅಗರವಾಲ್ ಮಾಡಿದ ತಾಕೀತು ಏನು..? ಸಭೆಗೆ ರೆಬಲ್ಸ್ ಗೈರಾಗಿದ್ದು ಯಾಕೆ..?

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಕಚೇರಿಯಲ್ಲಿ ಇಂದು ಸರಣಿ ಸಭೆಗಳು ನಡೆದವು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಶಾಸಕರು ಮತ್ತು ಸಂಸದರ ಸಭೆ ನಡೆಯಿತು. ಸಭೆಯಲ್ಲಿ 40 ಕ್ಕೂ ಹೆಚ್ಚು ಶಾಸಕರಷ್ಟೇ ಬಂದಿದ್ದರು ಕೆಲವರು ರಾಜ್ಯಾಧ್ಯಕ್ಷರ ಅನುಮತಿ ಪಡೆದು ಗೈರಾಗಿದ್ದಾರೆ ಎನ್ನಲಾಗಿದೆ.

ಆದ್ರೆ ಪ್ರಮುಖವಾಗಿ ಇಂದಿನ ಸಭೆಯಲ್ಲಿ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಗೈರಾಗಿದ್ದು ಎದ್ದು ಕಾಣುತಿತ್ತು‌.‌ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಇಂದಿನ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಮುಂದುವರೆದಿದೆ ಎಂಬ ಸಂದೇಶ ರವಾನಿಸಬೇಕಿತ್ತು. ಹೀಗಾಗಿ ಇಂದಿನ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ,

ಅಲ್ದೇ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣಾ ನಡೆಸಬೇಕು ಎಂದು ಪಟ್ಟು ಹಿಡಿದಿರುವುದರಿಂದ ರಾಜ್ಯ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಷ್ಟೇ ಪಾಲ್ಗೊಳ್ಳಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ ಹೀಗಾಗಿ ಇಂದಿನ ಸಭೆಗೆ ಗೈರಾಗಿದ್ದಾರೆ.

ಇನ್ನೂ ಇಂದಿನ ಸಭೆಯಲ್ಲಿ ಭಾಗಿಯಾಗಿದ್ದವರ ಅಭಿಪ್ರಾಯಗಳನ್ನ ಅಗರವಾಲ್ ಕೇಳಿದ್ದಾರೆ ಅಲ್ದೇ ಕೆಲವರ ಬಳಿ ಪ್ರತ್ಯೇಕವಾಗಿಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಹುತೇಕ ಶಾಸಕರು ಬಣಬಡಿದಾಟಕ್ಕೆ ಬ್ರೇಕ್ ಹಾಕಿ ಎಂದು ಅಗರವಾಲ್ ರಲ್ಲಿ ಮನವಿ ಮಾಡಿದ್ದಾರೆ. ಆದ್ರಲ್ಲೂ ರೆಬಲ್ ಟೀಂನಲ್ಲಿ ಗುರುತಿಸಿಕೊಂಡಿದ್ದ ಹರಿಹರ ಶಾಸಕ ಬಿಪಿ ಹರೀಶ್ ಸಭೆಯಲ್ಲಿ ರೇಣುಕಾಚಾರ್ಯ ವಿರುದ್ಧ ದೂರು ಹೇಳಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ಶಾಸಕರು ಯತ್ನಾಳ್ ಅಂಡ್ ಟೀಂ ಬಗ್ಗೆ ದೂರಿದ್ರೆ ಇನ್ನೂ ಕೆಲವರು ವಿಜಯೇಂದ್ರ ಟೀಂ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಅದಕ್ಕೆ ಅಗರವಾಲ್ ಅವರು ಮಾಡಿದ್ದು ತಪ್ಪು ಎಂದರೆ ನೀವು ಮಾಡಿದ್ದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳು ಹೈಕಮಾಂಡ್ ಗಮನಕ್ಕೆ ಇದೆ. ಮೊದಲು ಗುಂಪುಗಾರಿಕೆ ಬಿಡಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

Edited By : Abhishek Kamoji
PublicNext

PublicNext

21/01/2025 10:47 pm

Cinque Terre

222.11 K

Cinque Terre

0

ಸಂಬಂಧಿತ ಸುದ್ದಿ