ಮಹಾರಾಷ್ಟ್ರ : ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ವೇಳೆ ಅವಘಡ ಜರುಗಿದೆ. ಚಾಲಕ ಆಕಸ್ಮಿಕವಾಗಿ ರಿವರ್ಸ್ ಗೇರ್ ಚಲಾಯಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಾರ್ಕಿಂಗ್ ಸ್ಥಳದ ತಡೆಗೋಡೆಗೆ ಬಡಿದು ಸೀದಾ ಕೆಳಗೆ ಬಿದ್ದಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಣೆಯ ವಿಮಾನನಗರದ ಬಳಿಯ ಶುಭಾ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಅಲ್ಲಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ವೇಳೆ ಜೋರಾಗಿ ಸದ್ದು ಕೇಳಿ ಬಂದಿದ್ದು, ಸುತ್ತಮುತ್ತಲಿದ್ದ ಜನ ಸ್ಥಳಕ್ಕೆ ಓಡಿ ಬಂದಿದ್ದಾರೆ. ಪಾರ್ಕಿಂಗ್ ಸ್ಥಳದ ಕಟ್ಟಡ ಹಾಗೂ ಗೋಡೆಗಳ ಕಳಪೆ ಗುಣಮಟ್ಟ ಬೆಳಕಿಗೆ ಬಂದಿದ್ದು, ಅನೇಕರು ಕಟ್ಟಡ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ @AshTheWiz (Ashok Bijalwan) ಎಂಬುವವರು ಕಾರನ್ನು ಜೇಮ್ಸ್ ಬಾಂಡ್ ರೀತಿ ಚಾಲನೆ ಹಾಗೂ ಪಾರ್ಕಿಂಗ್ ಮಾಡದಿರಿ ಎಂದು ಬರೆದಿದ್ದಾರೆ.
PublicNext
23/01/2025 08:02 am