", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1737560053-WhatsApp-Image-2025-01-22-at-9.04.02-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಹಾರಾಷ್ಟ್ರ: ಮಹಾರಾಷ್ಟ್ರದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿಕೆಯಾಗಿದೆ. ಇನ್ನು ಸಾವಿನ ಹೆಚ್ಚಾಗಿ ಸಾಧ್ಯತ...Read more" } ", "keywords": "Maharashtra Train Accident, Prayagraj Bound Train, Railway Accident India, Train Derailment, Maharashtra News, Indian Railways Accident, Train Crash, Railway Safety Measures, Accident Investigation, Passenger Train Accident.,,Accident", "url": "https://publicnext.com/node" }
ಮಹಾರಾಷ್ಟ್ರ: ಮಹಾರಾಷ್ಟ್ರದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿಕೆಯಾಗಿದೆ. ಇನ್ನು ಸಾವಿನ ಹೆಚ್ಚಾಗಿ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಪಘಾತಕ್ಕೀಡಾಗಿ ಪುಷ್ಪಕ್ ಎಕ್ಸ್ಪ್ರೆಸ್ ಮಹಾರಾಷ್ಟ್ರದ ಜಲಗಾಂವ್ ನಿಂತಿದೆ. ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಈ ವೇಳೆ ರೈಲಿಗೆ ಬೆಂಕಿ ಬಿದ್ದಿದೆ ಎಂದು ಪ್ರಯಾಣಿಕರು ಭಯದಲ್ಲಿ ರೈಲಿನಿಂದ ಜಿಗಿದಿದ್ದಾರೆ. ಈ ವೇಳೆ ಪಕ್ಕದ ಟ್ರಾಕ್ ಮೇಲೆ ಹಲವರು ನಿಂತಿದ್ದು, ಇದೇ ಸಮಯಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಟ್ರಾಕ್ ಮೇಲೆ ನಿಂತಿದ್ದವರ ಮೇಲೆ ಹರಿದಿದೆ. ಈ ವೇಳೆ 8ಕ್ಕೂ ಹೆಚ್ಚು ಮಂದಿ ಜೀವವನ್ನು ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಅಸಲಿಗೆ ಪುಷ್ಪಕ್ ಟ್ರೇನ್ನಲ್ಲಿ ಬೆಂಕಿ ಆವರಿಸಿದೆ ಎಂದು ದೊಡ್ಡ ವದಂತಿ ಏಕಾಏಕಿ ಟ್ರೇನ್ ತುಂಬಾ ಹರಡಿದೆ. ಕೂಡಲೇ ಜೀವ ರಕ್ಷಣೆಗೆ ಪ್ರಯಾಣಿಕರು ಒಂದು ಹಳಿಯಿಂದ ಮತ್ತೊಂದು ಹಳಿಗೆ ನೆಗೆದಿದ್ದಾರೆ. ಈ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ಬರ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ಜನರ ಮೇಲೆ ಹರಿದು ಹೋಗಿದೆ.
ರೈಲು ದುರಂತದಲ್ಲಿ ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದು ಎಂತವರ ಎದೆಯನ್ನೂ ಜಲ್ಲೆನಿಸುವಂತಿದೆ.. ಸದ್ಯ ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ ಎಂಬ ವರದಿಯೂ ಕೂಡ ಬಂದಿದೆ.. ಕೆಲವು ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಹಲವು ಮಂದಿಗೆ ಗಾಯವಾಗಿದ್ದು ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಇನ್ನು ಘಟನೆ ಮಾಹಿತಿ ತಿಳಿದ ಸಿಎಂ ದೇವೆಂದ್ರ ಫಡ್ನವೀಸ್ ಇದೊಂದು ದುರದೃಷ್ಟಕರ ಘಟನೆ ಅತ್ಯಂತ ನೋವಿನ ಸಂಗತಿಯಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ.
PublicNext
22/01/2025 09:04 pm