", "articleSection": "International,Accident", "image": { "@type": "ImageObject", "url": "https://prod.cdn.publicnext.com/s3fs-public/387839-1737473452-WhatsApp-Image-2025-01-21-at-9.00.05-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿದ್ದಾರ...Read more" } ", "keywords": "A massive fire broke out at a ski resort in Turkey, resulting in a devastating loss of life. Unfortunately, 66 people lost their lives in this tragic incident ¹. The fire occurred at a hotel in the Bolu region of northwestern Turkey, which is a popular ski resort destination.,,International,Accident", "url": "https://publicnext.com/node" } ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿ ಭಾರೀ ಅಗ್ನಿ ಅವಘಡ : 66 ಮಂದಿ ದುರ್ಮರಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿ ಭಾರೀ ಅಗ್ನಿ ಅವಘಡ : 66 ಮಂದಿ ದುರ್ಮರಣ

ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಅಂಕಾರಾದ ವಾಯುವ್ಯಕ್ಕೆ 170 ಕಿಲೋಮೀಟರ್ ದೂರದಲ್ಲಿರುವ ಕರ್ತಲ್ಕಯಾ ರೆಸಾರ್ಟ್‌ಗೆ ಹಲವಾರು ಸಚಿವರು ಧಾವಿಸಿದ್ದಾರೆ. ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡದಿಂದ ಆಗಿರುವ ಪ್ರಾಣಹಾನಿಗೆ ತುಂಬಾ ನೋವಾಗಿದೆ. 66 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 51 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ವಿಷಾದ ವ್ಯಕ್ತಪಡಿಸಿದ್ದಾರೆ.

ಮರದಿಂದಲೇ ಮಾಡಲಾದ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಿಂದ ಪಾರಾಗಲು ಅನೇಕರು ಹೋಟೆಲ್‌ನ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಹೋಟೆಲ್‌ನಲ್ಲಿ ಸುಮಾರು 238 ಅತಿಥಿಗಳು ತಂಗಿದ್ದರು ಎಂದು ಹೇಳಲಾಗುತ್ತಿದೆ.

Edited By : Abhishek Kamoji
PublicNext

PublicNext

21/01/2025 09:01 pm

Cinque Terre

54.04 K

Cinque Terre

0